ಕಾರವಾರ: 'ಕೊನೆ ಕ್ಷಣದಲ್ಲಿ ನೀರು ಬಿಡುವ ಮಾಹಿತಿಯಿಂದ ಅವಾಂತರ'

* ಕದ್ರಾ ಭಾಗದಲ್ಲಿ ಹಲವು ಮನೆಗಳಿಗೆ ನುಗ್ಗಿದ ಪ್ರವಾಹ
* ಮನೆಯೊಳಗೆ ಹೊಕ್ಕಿದ ಪ್ರವಾಹದ ನೀರು, ಕೆಸರನ್ನು ಹೊರ ಹಾಕುತ್ತಿದ್ದಾರೆ‌ ಜನರು
* ಉರುಳಿ ಬಿದ್ದ ಮನೆಗಳಿಂದ ಪಾತ್ರೆಗಳು, ಅಗತ್ಯ ವಸ್ತುಗಳನ್ನು ಸಂಗ್ರಹಿಸುತ್ತಿರುವ ಜನರು
 

First Published Jul 28, 2021, 8:42 AM IST | Last Updated Jul 28, 2021, 8:42 AM IST

ಕಾರವಾರ(ಜು.28):  ಅಧಿಕಾರಿಗಳು ನೀರು ಬಿಡುವ ಮೊದಲು ಸರಿಯಾದ ಮಾಹಿತಿ ನೀಡಿಲ್ಲ. ನೀರು ಬಿಡೋ ಹತ್ತು- ಹದಿನೈದು ನಿಮಿಷ ಮೊದಲು ಹೇಳಿದ್ರೆ ನಾವೇನು ಮಾಡೋದು?.ಕಳೆದ ವರ್ಷವೂ ನೆರೆ ಬಂದಾಗ ಸರಕಾರದಿಂದ ಯಾವುದೇ ಪರಿಹಾರ ದೊರಕಿಲ್ಲ. ಸಾಲ ಮಾಡಿಕೊಂಡು ಅಂಗಡಿ ಮಾಡಿದ್ರೂ ಪ್ರವಾಹ ಎಲ್ಲಾ ಹಾಳು ಮಾಡಿದೆ. ತರಕಾರಿ, ಸೊಪ್ಪು ಮಾರಿಕೊಂಡು ಜೀವನ ಮಾಡ್ತಿದ್ದೆವು, ಮಕ್ಕಳ ಪುಸ್ತಕಗಳು ಕೂಡಾ ನೀರು ಪಾಲಾಗಿದೆ. ನಮಗೆ ಯಾರು ದಿಕ್ಕು ಸರ್...ಜೀವನವೇ ಸಂಪೂರ್ಣ ಹಾಳಾಗಿ ಹೋಯ್ತು ಅಂತ ಸಂತ್ರಸ್ತರು ಏಷ್ಯಾನೆಟ್ ಸುವರ್ಣ ನ್ಯೂಸ್ ಜತೆ ನೋವು ತೋಡಿಕೊಂಡು ಕಣ್ಣೀರು ಹಾಕಿದ ಪ್ರಸಂಗ ಜಿಲ್ಲೆಯಲ್ಲಿ ನಡೆದಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಕಾರವಾರ; ಪ್ರವಾಹ ಭೀಕರ, ಗಟ್ಟಿ ಮುಟ್ಟಾದ ಮನೆಗಳೆ ನೀರು ಪಾಲು