ಕಾರವಾರ; ಪ್ರವಾಹ ಭೀಕರ, ಗಟ್ಟಿ ಮುಟ್ಟಾದ ಮನೆಗಳೆ ನೀರು ಪಾಲು

* ಪ್ರವಾಹಕ್ಕೆ  ಗಟ್ಟಿಮುಟ್ಟಾಗಿದ್ದ ಮನೆಗಳೇ ನೆಲಸಮ!
* ಕದ್ರಾ ಒಳಭಾಗದ ಗಾಂಧೀನಗರ, ರಾಜೀವ ನಗರದಲ್ಲಿ 25ಕ್ಕೂ ಮಿಕ್ಕಿ ಮನೆಗಳು ಪುಡಿ-ಪುಡಿ
* ಮನೆಗಳಲ್ಲಿದ್ದ ವಸ್ತುಗಳನ್ನು ಹಾಗೆಯೇ ಬಿಟ್ಟು ಉಟ್ಟೆ ಬಟ್ಟೆಯಲ್ಲೇ ಪ್ರಾಣ ಹಿಡಿದುಕೊಂಡು ಹೋದ ಜನರು
* ಹಲವು ವರ್ಷಗಳಿಂದ ದುಡಿದು ಕಟ್ಟಿದ್ದಂತಹ ಮನೆಗಳು ಸಂಪೂರ್ಣ ಧರಾಶಾಹಿ

First Published Jul 28, 2021, 12:33 AM IST | Last Updated Jul 28, 2021, 12:33 AM IST

ಕಾರವಾರ(ಜು. 28) ಕದ್ರಾ ಒಳಭಾಗದ ಗಾಂಧೀನಗರ, ರಾಜೀವ ನಗರದಲ್ಲಿ 25ಕ್ಕೂ ಮಿಕ್ಕಿ ಮನೆಗಳು ಪುಡಿ-ಪುಡಿಯಾಗಿವೆ. ಪ್ರವಾಹದಿಂದಾಗಿ ಗಟ್ಟಿಮುಟ್ಟಾಗಿದ್ದ ಮನೆಗಳೇ ನೆಲಸಮವಾಗಿವೆ.

ಪ್ರತಿ ವರ್ಷ ನಮ್ಮನ್ನು ಹೊತ್ತುಕೊಂಡೆ ಬರಬೇಕಾ? ಅಜ್ಜಿಯ ಕಣ್ಣೀರು

ನಮಗೆ ಪರಿಹಾರದ ಬದಲು ಬೇರೆಡೆ ಜಾಗ ತೋರಿಸಿದರೆ ಅಲ್ಲೇ ಮನೆ ಮಾಡಿ‌ ಕುಳಿತುಕೊಳ್ತೇವೆ. 'ಅಧಿಕಾರಿಗಳು ಯಾರೂ ಸ್ಥಳಕ್ಕೆ ಭೇಟಿ ನೀಡಿಲ್ಲ, ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಸ್ಥಳಕ್ಕೆ ಭೇಟಿ ನೀಡಿ ನಮ್ಮ ನೋವು ಕೇಳಬೇಕಿದೆ'ಮತ್ತೆ ಜೀವನ ಕಟ್ಟಿಕೊಳ್ಳಲು ಸಹಾಯ ಬೇಕಿದೆ  ಎಂದು ಸಂತ್ರಸ್ತರು ಮನವಿ ಮಾಡಿಕೊಂಡಿದ್ದಾರೆ.