Uttara Kannada: ಶಿಕ್ಷಣಕ್ಕಾಗಿ ಕಿಲೋ ಮೀಟರ್‌ಗಟ್ಟಲೇ ನಡೆಯುತ್ತಿದ್ದ ಶಿರ್ವೆ ವಿದ್ಯಾರ್ಥಿಗಳಿಗೆ ಬಸ್‌ ಭಾಗ್ಯ!

*ಶಿಕ್ಷಣಕ್ಕಾಗಿ  ಕಿಲೋ ಮೀಟರ್‌ಗಟ್ಟಲೇ ನಡೆಯುವ ವಿದ್ಯಾರ್ಥಿಗಳು
*ಸಾಕಷ್ಟು ಸಮಯದಿಂದ ಬಸ್‌ ಸೇವೆಗಾಗಿ ಕಾಯುತ್ತಿದ್ದ  ಶಿರ್ವೆಯ ಮಕ್ಕಳು
*ದಟ್ಟವಾದ ಕಾಡಿನಲ್ಲಿ ಹತ್ತಾರು ಕಿ.ಮೀ ನಡೆದು ಶಾಲೆ-ಕಾಲೇಜಿಗೆ ಹಾಜರು
*ವಿದ್ಯಾರ್ಥಿಗಳ ಬೇಡಿಕೆಗೆ ಸ್ಪಂದಿಸಿದ ಸ್ಪಂದಿಸಿದ ಶಾಸಕಿ ರೂಪಾಲಿ ನಾಯ್ಕ್
*ಕೂಡಲೇ ಬಸ್ ಸೌಲಭ್ಯ ಒದಗಿಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು

First Published Feb 21, 2022, 11:39 AM IST | Last Updated Feb 21, 2022, 11:44 AM IST

ಕಾರವಾರ (ಫೆ. 21):  ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕುಗ್ರಾಮವಾದ ಶಿರ್ವೆಯ ವಿದ್ಯಾರ್ಥಿಗಳು ದಟ್ಟವಾದ ಕಾಡಿನ ರಸ್ತೆಯಲ್ಲಿ ಹತ್ತಾರು ಕಿ.ಮೀ ನಡೆದುಕೊಂಡೇ ಶಾಲೆ-ಕಾಲೇಜಿಗೆ ತೆರಳಿ ಶಿಕ್ಷಣ ಪಡೆಯುತ್ತಿದ್ದರು. ಶಿರ್ವೆ ಗ್ರಾಮದಿಂದ ದೇವಳಮಕ್ಕಿಯ ಆದರ್ಶ ವಿದ್ಯಾಲಯದ 18 ವಿದ್ಯಾರ್ಥಿಗಳು, ಕೆರವಾಡಿಯ ದುರ್ಗಾದೇವಿ ಪದವಿಪೂರ್ವ ಕಾಲೇಜಿಗೆ 9 ವಿದ್ಯಾರ್ಥಿಗಳು ಹಾಗೂ ಸಿದ್ದರ ಗ್ರಾಮದ ಐಟಿಐ ಕಾಲೇಜಿನಲ್ಲಿ ಓರ್ವ ವಿದ್ಯಾರ್ಥಿ ತೆರಳುತ್ತಿದ್ದರು. 

ಈ ಪ್ರದೇಶ ಕುಗ್ರಾಮವಾಗಿರುವ ಕಾರಣ ಹೆಚ್ಚು ವಾಹನಗಳೂ ಈ ಪ್ರದೇಶದಲ್ಲಿ ಓಡಾಟ ನಡೆಸುವುದಿಲ್ಲ. ಬಹುತೇಕ ಗ್ರಾಮಸ್ಥರು ಕೂಲಿ ಮಾಡಿ ಜೀವನ ಮಾಡುತ್ತಿರುವುದರಿಂದ ಸ್ವಂತ ವಾಹನಗಳನ್ನೂ ಹೊಂದಿಲ್ಲ. ಹೀಗಾಗಿ ಸಾಕಷ್ಟು ಸಮಯಗಳಿಂದ ಶಿರ್ವೆ ವ್ಯಾಪ್ತಿಗೆ ಬಸ್ ವ್ಯವಸ್ಥೆ ಕಲ್ಪಿಸಬೇಕೆಂದು ಜನರು ಬೇಡಿಕೆಯಿಟ್ಟಿದ್ದರು. 

ಇದನ್ನೂ ಓದಿ: Uttara Kannada: ಬಣ್ಣ ಬಣ್ಣದ ಚಿತ್ರಗಳಿಂದ ಕಾನೂನಿನ ಅರಿವು ಮೂಡಿಸುತ್ತಿದೆ ಯಲ್ಲಾಪುರ ಪೊಲೀಸ್ ಠಾಣೆ!

ಆದರೆ, ಯಾವಾಗ ಜನರ ಹಾಗೂ ವಿದ್ಯಾರ್ಥಿಗಳ ಈ ಬೇಡಿಕೆ ಮಾಧ್ಯಮದ ಮುಂದೆ ಇಡಲ್ಪಟ್ಟಿತೋ ಕೂಡಲೇ ಸ್ಪಂದಿಸಿದ ಕಾರವಾರ- ಅಂಕೋಲಾ ಶಾಸಕಿ ರೂಪಾಲಿ ನಾಯ್ಕ್, ಕರ್ನಾಟಕ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಕೂಡಲೇ ಬಸ್ ಸೌಲಭ್ಯ ಒದಗಿಸಿದ್ದಾರೆ. ಈ ಕುರಿತ ಒಂದು ವರದಿ ಇಲ್ಲಿದೆ.

Video Top Stories