Uttara Kannada: ಬಣ್ಣ ಬಣ್ಣದ ಚಿತ್ರಗಳಿಂದ ಕಾನೂನಿನ ಅರಿವು ಮೂಡಿಸುತ್ತಿದೆ ಯಲ್ಲಾಪುರ ಪೊಲೀಸ್ ಠಾಣೆ!

*ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ನಗರದ ಹೃದಯ ಭಾಗದಲ್ಲಿರುವ ಪೊಲೀಸ್ ಠಾಣೆ 
*ಠಾಣೆಯ ಆವರಣಕ್ಕೆ ಬಂದ್ರೆ ಯಾವುದೋ ಉದ್ಯಾನವನಕ್ಕೆ ಭೇಟಿ ನೀಡಿದ ಅನುಭವ!
*ಅತ್ಯುತ್ತಮ ಸಂದೇಶಗಳೊಂದಿಗೆ ಬಣ್ಣ ಬಣ್ಣದ ಚಿತ್ರಗಳಿಂದ ಕಂಗೊಳಿಸುತ್ತಿರುವ ಠಾಣೆ 
*ಠಾಣೆಗೆ ಬರುವ ಜನರೊಂದಿಗೆ ವಿನಯಪೂರ್ವಕವಾಗಿ ಮಾತನಾಡುವ ಸಿಬ್ಬಂದಿ 
*ಸುಂದರ ಚಿತ್ರಗಳ ಮೂಲಕ ಕಾನೂನಿನ ಬಗ್ಗೆ ಅರಿವು ಮೂಡಿಸುವ ಪ್ರಯತ್ನ

First Published Feb 18, 2022, 2:48 PM IST | Last Updated Feb 18, 2022, 3:25 PM IST

ಉತ್ತರ ಕನ್ನಡ (ಫೆ. 18): ಪೊಲೀಸರು ಅಂದ್ರೆ ಸಾಕು ಜನರಲ್ಲಿ ಅದೇನೋ ಭಯ. ಪೊಲೀಸ್ ಠಾಣೆ (Police Station) ನೋಡಿದ್ರೆಂತೂ ಜನರು ನರಕ ದರ್ಶನವಾದಂತೆ, ಯಾವುದೋ ಭೂತ ನೋಡಿದಂತೆ ಆಡಲು ಪ್ರಾರಂಭಿಸ್ತಾರೆ. ಠಾಣೆ ಮೆಟ್ಟಿಲು ಹತ್ತುವುದಂತೂ ಪೂರ್ವಜನ್ಮದಲ್ಲಿ ಮಾಡಿದ ಪಾಪ ಕರ್ಮವೋ ಅನ್ನೋ ಭಾವನೆ ಜನರಲ್ಲಿದೆ. ಆದರೆ, ಉತ್ತರ ಕನ್ನಡ (Uttara Kannada) ಜಿಲ್ಲೆಯ ಯಲ್ಲಾಪುರ ನಗರದ ಹೃದಯ ಭಾಗದಲ್ಲಿರುವ ಪೊಲೀಸ್ ಠಾಣೆ ನೋಡಿದ್ರೆ ನೀವು ಆಶ್ಚರ್ಯ ಪಡೋದ್ರಲ್ಲಿ ಸಂಶಯವೇ ಇಲ್ಲ. 

ಇದನ್ನೂ ಓದಿ: Uttara Kannada: ದ್ವೀಪದಲ್ಲಿರುವ ದೇವಳದ ಜಾತ್ರೆಗೆ ತೆರಳೋದೆ ಒಂದು ಸಾಹಸ..!

ಈ ಪೊಲೀಸ್ ಠಾಣೆಯ ಆವರಣಕ್ಕೆ ಬಂದ್ರೆ ಯಾವುದೋ ಉದ್ಯಾನವನಕ್ಕೆ ಭೇಟಿ ನೀಡಿದಂತೆ ಅನಿಸದಿರದು.‌ ಅತ್ಯುತ್ತಮ ಸಂದೇಶಗಳೊಂದಿಗೆ ಬಣ್ಣ ಬಣ್ಣದ ಚಿತ್ರಗಳಿಂದ ಈ ಠಾಣೆ ಕಂಗೊಳಿಸುತ್ತಿದೆ. ಈ ಠಾಣೆಗೆ ಭೇಟಿ ನೀಡುವ ಜನರಲ್ಲೂ ಕೂಡಾ ಅತೀ ಸ್ನೇಹದಿಂದ ಮಾತನಾಡಿ, ಅವರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಸ್ಪಂದನೆ ನೀಡುವ ಕೆಲಸವನ್ನು ಇಲ್ಲಿನ ಅಧಿಕಾರಿಗಳು ನಡೆಸುತ್ತಿದ್ದಾರೆ. ಪೊಲೀಸ್ ಠಾಣೆಯನ್ನು ಆದರ್ಶ ಠಾಣೆಯನ್ನಾಗಿಸಿ ಇಡೀ ರಾಜ್ಯಕ್ಕೆ ಮಾದರಿಯಾಗಿಸುವ ನಿಟ್ಟಿನಲ್ಲಿ ಇಲ್ಲಿನ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಮೊದಲು ಪೊಲೀಸ್ ಠಾಣೆಗೆ ಭೇಟಿ ನೀಡಲು ಭಯ ಪಡುತ್ತಿದ್ದ ಜನರು, ಇದೀಗ ಸುಸಜ್ಜಿತ ಕಟ್ಟಡ ಹಾಗೂ ಕಲಾತ್ಮಕತೆಯಿಂದ ಕೂಡಿದ ಗೋಡೆ, ಕಂಪೌಂಡ್‌ ಹಾಗೂ ಉತ್ತಮ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದಿಂದಾಗಿ ಸಂತೋಷಗೊಂಡಿದ್ದಾರೆ. ಈ ಕುರಿತ ವರದಿ ಇಲ್ಲಿದೆ.