Belagavi Leopard News: ಚಿರತೆ ಹಿಡಿಯಲು ಆಪರೇಷನ್ ಗಜಪಡೆ: ಹೀಗಿದೆ ಕಾರ್ಯಾಚರಣೆ

Belgaum Elusive Leopard: ಬೆಳಗಾವಿ ಗಾಲ್ಫ್ ಕೋರ್ಸ್‌ ಮೈದಾನದಲ್ಲೇ ನುಸುಳಿರುವ ಚಿರತೆ ಅಲ್ಲಿಯೇ ಓಡಾಡುತ್ತಿರುವ ಸುಳಿವು ಸಿಕ್ಕಿದೆ.  

First Published Aug 25, 2022, 7:15 PM IST | Last Updated Aug 25, 2022, 7:25 PM IST

ಬೆಳಗಾವಿ (ಆ. 25):  ಬೆಳಗಾವಿ ಗಾಲ್ಫ್ ಕೋರ್ಸ್‌ ಮೈದಾನದಲ್ಲೇ ನುಸುಳಿರುವ ಚಿರತೆ (Leopard) ಅಲ್ಲಿಯೇ ಓಡಾಡುತ್ತಿರುವ ಸುಳಿವು ಸಿಕ್ಕಿದೆ. ಅರಣ್ಯ ಇಲಾಖೆ ಟ್ರ್ಯಾಪ್ ಕ್ಯಾಮರಾದಲ್ಲಿ ಚಿರತೆ ಸೆರೆಯಾಗಿದ್ದು, ಚಿರತೆ ಪತ್ತೆ ಹಚ್ಚಲು ಅರಣ್ಯದ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ. ಗಾಲ್ಫ್ ಮೈದಾನದ 250 ಎಕರೆಗೂ ಹೆಚ್ಚು ಪ್ರದೇಶದಲ್ಲಿ‌ ಶೋಧಕಾರ್ಯ ನಡೆಯುತ್ತಿದ್ದು, ನಾಲ್ಕು ಜೆಸಿಬಿ, ಎರಡು ಆನೆಗಳಿಂದ ಕಾರ್ಯಾಚರಣೆ ನಡೆಯತ್ತಿದೆ. 

ದಟ್ಟವಾದ ಮರಗಿಡಗಂಟೆಗಳ ಮಧ್ಯೆ ಚಿರತೆ ಅವತಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಎರಡು ಆನೆಗಳ ಮೇಲೆ ಒಬ್ಬೊಬ್ಬ ಅರವಳಿಕೆ ತಜ್ಞರು ಕುಳಿತು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಜೆಸಿಬಿಯ ಬಕೆಟ್ ಮೇಲೂ ಅರವಳಿಕೆ ತಜ್ಞರು ಕುಳಿತು ಶೋಧ ನಡೆಸುತ್ತಿದ್ದಾರೆ. ಕಾರ್ಯಾಚರಣೆಯಲ್ಲಿ ಒಟ್ಟು ಎಂಟು ಜನ ಅರವಳಿಕೆ ತಜ್ಞರು ಭಾಗಿಯಾಗಿದ್ದಾರೆ. ಇಲ್ಲಿದೆ ಕಾರ್ಯಾಚರಣೆಯ ಕಂಪ್ಲೀಟ್‌ ಡಿಟೇಲ್ಸ್

ಅರಣ್ಯ ಇಲಾಖೆ ಸಿಬ್ಬಂದಿ ಚಳ್ಳೆಹಣ್ಣು ತಿನಿಸುತ್ತಿರುವ ಚಾಣಾಕ್ಷ ಚಿರತೆ