Asianet Suvarna News Asianet Suvarna News

ರಾಯಚೂರು: ಮಾನ್ವಿಯಲ್ಲಿ ಡೆಂಘಿ ಅಬ್ಬರ, ಪ್ರತಿ ದಿನ ಐದಾರು ಪಾಸಿಟಿವ್ ಕೇಸ್ ಪತ್ತೆ

*  ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಡೆಡ್ಲಿ ಡೆಂಘಿ ಅಬ್ಬರ 
*  ಡೆಂಘಿ ಜ್ವರಕ್ಕೆ ಇಬ್ಬರು ಬಲಿ
*  20 ದಿನದಲ್ಲಿ 121 ಮಂದಿಗೆ ಡೆಂಘಿ ಜ್ವರ 
 

First Published Oct 23, 2021, 9:40 AM IST | Last Updated Oct 23, 2021, 9:40 AM IST

ರಾಯಚೂರು(ಅ.23): ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಡೆಡ್ಲಿ ಡೆಂಘಿ ಅಬ್ಬರ ಜೋರಾಗಿದೆ. ಹೌದು,  ಡೆಂಘಿ ಜ್ವರಕ್ಕೆ ಪಟ್ಟಣದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ನವೀನ್‌(18) ಹಾಗೂ ಅಶ್ವಿನಿ(8) ಡೆಡ್ಲಿ ಡೆಂಘಿಗೆ ಬಲಿಯಾದವರಾಗಿದ್ದಾರೆ. ಮಾನ್ವಿಯಲ್ಲಿ 20 ದಿನದಲ್ಲಿ 1328 ಮಕ್ಕಳಿಗೆ ಡೆಂಘಿ ಟೆಸ್ಟ್‌ ಮಾಡಲಾಗಿದೆ. ಮಾನ್ವಿ ಪಟ್ಟಣದಲ್ಲಿ ಪ್ರತಿ ದಿನ ಐದಾರು ಪಾಸಿಟಿವ್ ಕೇಸ್‌ಗಳು ಪತ್ತೆಯಾಗುತ್ತಿವೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ 20 ದಿನದಲ್ಲಿ 121 ಮಂದಿಗೆ ಡೆಂಘಿ ಜ್ವರ ಒಕ್ಕರಿಸಿದೆ. 

ಹಳೆಯ ದೋಸ್ತಿಗಳ ಸಾಲಮನ್ನಾ ಸಮರ, ಬಾಂಗ್ಲಾ ದೌರ್ಜನ್ಯಕ್ಕೆ ಸಿಗದ ಉತ್ತರ

Video Top Stories