ಚಾಮರಾಜನಗರ: ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ನರ್ಸ್‌ಗಳ ಕೊರತೆ, ಆಪರೇಷನ್‌ ಸ್ಟಾಪ್!

- ನರ್ಸ್ ಸಮಸ್ಯೆಗೆ ಶಸ್ತ್ರ ಚಿಕಿತ್ಸೆ ಮುಂದೂಡ್ತಿರೋ ವೈದ್ಯರು!

- 750 ಬೆಡ್ ಆಸ್ಪತ್ರೆಗೆ ಕೇವಲ 123 ಮಂದಿ‌ ನರ್ಸ್‌ಗಳು

- 200 ಕ್ಕೂ ಹೆಚ್ಚು ನರ್ಸ್ ನೇಮಕಕ್ಕೆ ಸರ್ಕಾರಕ್ಕೆ ಪ್ರಸ್ತಾಪ

- ಇನ್ನೂ ಕೂಡಾ ಅನುಮತಿ ಸಿಗದೇ ನೇಮಕಾತಿ ಬಾಕಿ

First Published May 19, 2022, 10:54 AM IST | Last Updated May 19, 2022, 11:11 AM IST

ಚಾಮರಾಜನಗರ (ಮೇ.19):  ಇಲ್ಲಿನ ಸರ್ಕಾರಿ ಜಿಲ್ಲಾಸ್ಪತ್ರೆ ಬಡವರಿಗೆ, ಮಧ್ಯಮ ವರ್ಗದವರ ಪಾಲಿಗೆ ಆಶಾಕಿರಣ. ಜಿಲ್ಲೆಯ ಬಡ ಮತ್ತು ಮಧ್ಯಮ ವರ್ಗದ ಅನಾರೋಗ್ಯ ಪೀಡಿತರು ಈ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಹರಿದು ಬರುತ್ತಾರೆ.  ಸಣ್ಣಪುಟ್ಟ ಚಿಕಿತ್ಸೆಯಿಂದ ಹಿಡಿದು ದೊಡ್ಡ ಪ್ರಮಾಣದ ಶಸ್ತ್ರಚಿಕಿತ್ಸೆಗಳು ಈ ಆಸ್ಪತ್ರೆಯಲ್ಲಿ ನಡೆಯುತ್ತವೆ. ಅಂದಾಜು ಪ್ರತಿದಿನ 40ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದವು. 

ಆದ್ರೆ ಸದ್ಯ ನರ್ಸ್ ಮತ್ತು ಸಿಬ್ಬಂದಿಗಳ ಕೊರತೆಯಿಂದ ರೋಗಿಗಳ ಪಾಡು ಹೇಳತೀರದಾಗಿದೆ. ಆಸ್ಪತ್ರೆಯಲ್ಲಿ ವೈದ್ಯರ ಸಂಖ್ಯೆ ಸರಿಯಾಗಿದೆ. ಆದ್ರೆ ನರ್ಸ್‌ಗಳ ಸಂಖ್ಯೆ ಅರ್ಧದಷ್ಟು ಇಲ್ಲ. ಹೀಗಾಗಿ ರೋಗಿಗಳು ಶಸ್ತ್ರಚಿಕಿತ್ಸೆಗೆಂದು ಆಸ್ಪತ್ರೆಗೆ ದಾಖಲಾಗಿ ಹತ್ತು ದಿನಗಳಾದರೂ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ. ಇನ್ನೂ ದೂರದ ಮೈಸೂರು ಅಥವಾ ತಮಿಳುನಾಡಿಗೆ ರೋಗಿಗಳು ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ. ಆಸ್ಪತ್ರೆಯಲ್ಲಿ ನರ್ಸ್‌ಗಳು ಇಲ್ಲದಿರುವುದರಿಂದ ನಮಗೆ ತೊಂದರೆಯುಂಟಾಗುತ್ತಿದೆ ಎಂಬುದು ರೋಗಿಗಳ ಆರೋಪ.

ಚಾಮರಾಜನಗರ: ಮನುಷ್ಯನನ್ನೇ ಬಲಿ ಕೊಟ್ಟು ಮತ್ತೆ ಬದುಕಿಸುವ ಸೀಗಮಾರಮ್ಮ ಬಲಿ ರಹಸ್ಯ!

ಸದ್ಯ ನರ್ಸ್‌ಗಳ ಕೊರತೆಯಿಂದ ಸಾಮಾನ್ಯ ಶಸ್ತ್ರಚಿಕಿತ್ಸೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಬಡರೋಗಿಗಳು ಪರದಾಡುತ್ತಿದ್ದಾರೆ. ಇನ್ನೂ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಬಗ್ಗೆ ಈಗಾಗಲೇ ಸರ್ಕಾರದ ಗಮನಕ್ಕೆ ತರಲಾಗಿದೆ. 200 ಕ್ಕೂ ಹೆಚ್ಚು ನರ್ಸ್‌ಗಳ ಅವಶ್ಯಕತೆ ಆಸ್ಪತ್ರೆಗೆ ಇದೆ. ಹೀಗಾಗಿ ನಾವು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ. ಸರ್ಕಾರದ ಮಟ್ಟದಿಂದಲೂ ಸೂಕ್ತ ಸ್ಪಂದನೆ ಸಿಕ್ಕಿದೆ. ಇನ್ನು ಕೇಲವೇ ದಿನಗಳಲ್ಲಿ ನರ್ಸ್‌ಗಳ ನೇಮಕ ಪ್ರಕ್ರಿಯೆ ಆರಂಭವಾಗಲಿದೆ ಎಂಬುದು ಅಧಿಕಾರಿಗಳ ಮಾತು.

Malai Mahadeshwara Sanctuary ಹುಲಿಸಂರಕ್ಷಿತ ಪ್ರದೇಶವನ್ನಾಗಿಸಲು ಸರ್ಕಾರದ ಮೀನಾಮೇಷ?

ಒಟ್ಟಾರೆ 175 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಆಸ್ಪತ್ರೆಯಲ್ಲಿ ನರ್ಸ್‌ಗಳ ಕೊರತೆ ಇರುವುದು ಸರ್ಕಾರದ ಆಡಳಿತಕ್ಕೆ ಹಿಡಿದ ಕೈಗನ್ನಡಿ.ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಅಗತ್ಯ ಸಿಬ್ಬಂದಿ ನೇಮಕ ಮಾಡಿ ಬಡಜನರ ತೊಂದರೆ ದೂರ ಮಾಡಲಿ ಎಂಬುದೇ ಎಲ್ಲರ ಆಶಯ.