ಬಸ್ ಮುಷ್ಕರ: ಸಂಕಷ್ಟ ತೋಡಿಕೊಂಡ ಸಾರಿಗೆ ನೌಕರ
3ನೇ ದಿನವೂ ಮುಂದುವರಿದ ಸಾರಿಗೆ ನೌಕರರ ಮುಷ್ಕರ| ಪಡಬಾರದ ಕಷ್ಟಗಳನ್ನ ಎದುರಿಸುತ್ತಿರುವ ರಾಜ್ಯದ ಜನತೆ| ಕೆಲಸಕ್ಕೆ ಸೇರಿ 10 ವರ್ಷಗಳಾದರೂ ಟ್ರೈನಿ| ಸ್ವಲ್ಪ ವೇತನ ಹೆಚ್ಚಾದರೂ ಕುಟುಂಬಕ್ಕೆ ಆಗ್ತಿತ್ತು ಆಧಾರ: ಸಾರಿಗೆ ನೌಕರ|
ಕಲಬುರಗಿ(ಏ.09): ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದೆ. ಹೀಗಾಗಿ ರಾಜ್ಯದ ಜನತೆ ಪಡಬಾರದ ಕಷ್ಟಗಳನ್ನ ಎದುರಿಸುತ್ತಿದ್ದಾರೆ. ಏತನ್ಮಧ್ಯೆ ಸಾರಿಗೆ ನೌಕರನೊಬ್ಬ ತಮ್ಮ ಸಂಕಷ್ಟಗಳನ್ನ ತೋಡಿಕೊಂಡ ಘಟನೆ ನಡೆದಿದೆ. ಮೇಲಧಿಕಾರಿಗಳ ಒತ್ತಡಕ್ಕೆ ಮಣಿದು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಬೇಡಿಕೆ ಈಡೇರಿಸುವುದೇ ಅನುಮಾನ, ಒತ್ತಡ ತಂತ್ರಕ್ಕೆ ಮೊರೆ ಹೋದ ಸರ್ಕಾರ.!
ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಸಂಕಷ್ಟ ತೋಡಿಕೊಂಡ ಸಾರಿಗೆ ನೌಕರ, ಕೆಲಸಕ್ಕೆ ಸೇರಿ 10 ವರ್ಷಗಳಾದರೂ ನಾನಿನ್ನೂ ಟ್ರೈನಿಯಾಗಿದ್ದೇನೆ. ಸ್ವಲ್ಪ ವೇತನ ಹೆಚ್ಚಾದರೂ ಕುಟುಂಬಕ್ಕೆ ಆಧಾರ ಆಗುತ್ತದೆ. ನನ್ನ ಹೆಂಡತಿ ಕೂಲಿ ಕೆಲಸ ಮಾಡುತ್ತಿದ್ದಾಳೆ. ಇನ್ನಾದ್ರೂ ಸರ್ಕಾರ ಇತ್ತ ಗಮನಿಸಲಿ ಎಂದು ಮನವಿ ಮಾಡಿಕೊಂಡಿದ್ದಾನೆ.