Asianet Suvarna News Asianet Suvarna News

ಚಾರ್ಮಾಡಿ ಘಾಟಿಯಲ್ಲಿ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್

Jul 30, 2021, 3:40 PM IST

ಚಿಕ್ಕಮಗಳೂರು (ಜು.30):  ಚಾರ್ಮಾಡಿ ಘಾಟಿಯಲ್ಲಿ ಕೊಟ್ಟಿಗೆಹಾರದಿಂದ ನಾಲ್ಕೈದು ಕಿ.ಮೀವರೆಗೂ ಫುಲ್ ಟ್ರಾಫಿಕ್ ಜಾಮ್ ಉಂಟಾಗಿದೆ. ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರು, ಪ್ರಯಾಣಿಕರು ಪರದಾಡುವಂತಾಗಿದೆ. 

ಚಾರ್ಮಾಡಿ ಘಾಟ್‌ನಲ್ಲಿ ಜಲಧಾರೆಗಳ ಹೊಸ ಲೊಕ, ಕಣ್ಮನಗಳಿಗೆ ಹಬ್ಬ..!

ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಬಳಿಯ ಚಾರ್ಮಾಡಿ ಘಾಟಲ್ಲಿ ಭಾರಿ ಗಾತ್ರದ ಲಾರಿ-ಬಸ್ಸುಗಳು ಸಂಚರಿಸಲು ನಿರ್ಬಂಧಿಸಿದ್ದು, ಡಿಸಿ ಆದೇಶದ ಮಧ್ಯೆಯೂ ಕಿರಿದಾದ ರಸ್ತೆಯಲ್ಲಿ ದೊಡ್ಡ ಲಾರಿ, ಬಸ್ಸುಗಳು ಸಂಚಾರ ಮಾಡಿದ್ದು ಹೀಗಾಗಿ ಬೆಳಗ್ಗೆಯಿಂದಲೂ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ ಉಂಟಾಗಿದೆ.