ಮಾರಕ ಕೊರೋನಾ ವಿರುದ್ಧ ಹೋರಾಡಿ ಗೆದ್ದ 10ರ ಪೋರ: ಸೋಂಕು ಪೀಡಿತ ಮಕ್ಕಳಿಗೆ ಈತನೇ ಸ್ಪೂರ್ತಿ..!
ಕೊರೋನಾದಿಂದ ಗುಣಮುಖನಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಬಾಲಕ| ಚಂದನ್ ಎಂಬಾತನೇ ಕೊರೋನಾ ವಿರುದ್ಧ ಹೋರಾಡಿದ ಬಾಲಕ|ಅಮ್ಮನಿಂದ ಈ ಬಾಲಕನಿಗೆ ಕೊರೋನಾ ವೈರಸ್ ತಗುಲಿತ್ತು|
ಬೆಂಗಳೂರು(ಮೇ.15): ಕೊರೋನಾ ಪಾಸಿಟಿವ್ ಆಗಿದ್ದ 10 ವರ್ಷದ ಬಾಲಕ ಸಂಪೂರ್ಣವಾಗಿ ಗುಣಮುಖನಾಗಿ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾನೆ. ಈ ಬಾಲಕ ಏಕಾಂಗಿಯಾಗಿ ಹೇಗೆ ಡೆಡ್ಲಿ ವೈರಸ್‌ನಿಂದ ಹೋರಾಡಿದ್ದ ಎಂಬುದು ಕೊರೋನಾ ಪೀಡಿತ ಮಕ್ಕಳಿಗೆ ಸ್ಪೂರ್ತಿಯಾಗಿದ್ದಾನೆ.
ಮೈಸೂರಿನಲ್ಲಿ ಕೊರೊನಾ ವಾರಿಯರ್ಸ್‌ಗೆ ಹೂಮಳೆಗೈದು ಗೌರವ ಸಲ್ಲಿಸಿದ ಜನತೆ
ಚಂದನ್ ಎಂಬಾತನೇ ಕೊರೋನಾ ವಿರುದ್ಧ ಹೋರಾಡಿದ ಬಾಲಕನಾಗಿದ್ದಾನೆ. ಅಪ್ಪ ಅಮ್ಮನಿಂದ ಈ ಬಾಲಕನಿಗೆ ಕೊರೋನಾ ವೈರಸ್ ತಗುಲಿತ್ತು. ಆಸ್ಪತ್ರೆಯಲ್ಲಿ ಟ್ರೀಟ್‌ಮೆಂಟ್ ಅವಧಿಯನ್ನ ಹೇಗೆ ಕಳೆದ ಎಂಬುದುದನ್ನು ಸ್ವತಃ ಅವನೇ ವಿವರಿಸಿದ್ದಾನೆ. ಸುವರ್ಣ ನ್ಯೂಸ್ ಜೊತೆ ಕೊರೋನಾ ಚಿಕಿತ್ಸೆ ಬಗ್ಗೆ ಮಾತನಾಡಿದ್ದಾನೆ.