ಬೆಂಗಳೂರಿಂದ ಬೆಳಗಾವಿಗೆ ಬಸ್; ಸಿಹಿ ವಿತರಿಸಿ ಪ್ರಯಾಣಕ್ಕೆ ಚಾಲನೆ

ಬರೋಬ್ಬರಿ 56 ದಿನಗಳ ಬಳಿಕ ಇಂದಿನಿಂದ ಸಂಚಾರಿ ಬಸ್‌ಗಳ ಓಡಾಟ ಆರಂಭವಾಗಿದೆ. ಬೆಳಗಾವಿ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಸಿಹಿ ತಿಸಿಸು ವಿತರಿಸಿ ಪ್ರಯಾಣಕ್ಕೆ ಶುಭ ಕೋರಿದ್ದಾರೆ.

First Published May 19, 2020, 2:46 PM IST | Last Updated May 19, 2020, 2:46 PM IST

ಬೆಳಗಾವಿ(ಮೇ.19): ಇದೀಗ ನಾಲ್ಕನೇ ಹಂತದ ಲಾಕ್‌ಡೌನ್ ಜಾರಿಗೆ ಬಂದಿದ್ದು, ಅಂತರ್‌ ಜಿಲ್ಲಾ ಬಸ್ ಓಡಾಡಕ್ಕೆ ಅನುಮತಿ ನೀಡಲಾಗಿದೆ. ಬೆಳಗಾವಿಯಿಂದ ಬೆಂಗಳೂರಿಗೆ ಹೊರಟ ಮೊದಲ ಬಸ್‌ ಪ್ರಯಾಣಿಕರಿಗೆ ಸಿಹಿ ವಿತರಿಸಿ ಪ್ರಯಾಣಕ್ಕೆ ಚಾಲನೆ ನೀಡಲಾಯಿತು.

ಬರೋಬ್ಬರಿ 56 ದಿನಗಳ ಬಳಿಕ ಇಂದಿನಿಂದ ಸಂಚಾರಿ ಬಸ್‌ಗಳ ಓಡಾಟ ಆರಂಭವಾಗಿದೆ. ಬೆಳಗಾವಿ ಬಸ್ ನಿಲ್ದಾಣದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಮಹಾದೇವಪ್ಪ ಮುಂಜಿ ಸಿಹಿ ತಿಸಿಸು ವಿತರಿಸಿ ಪ್ರಯಾಣಕ್ಕೆ ಶುಭ ಕೋರಿದ್ದಾರೆ.

ಬಸ್‌ ಸಂಚಾರಕ್ಕೆ ಅನುಮತಿಯೇನೋ ಸಿಕ್ಕಿದೆ ಆದ್ರೆ ಪ್ರಯಾಣಿಕರ ಪರದಾಟ ತಪ್ಪಿಲ್ಲ..!

ಮೊದಲ ಬಸ್‌ನಲ್ಲಿ 30 ಪ್ರಯಾಣಿಕರು ಬೆಂಗಳೂರಿನತ್ತ ಹೊರಟಿದ್ದು, ಮೂರು ಸೀಟು ಇರುವಲ್ಲಿ ಇಬ್ಬರು ಹಾಗೂ ಎರಡು ಸೀಟ್ ಇರುವಲ್ಲಿ ಒಬ್ಬ ಪ್ರಯಾಣಿಕನಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.