Asianet Suvarna News Asianet Suvarna News

ವಸತಿಗಾಗಿ ಸುಡುಗಾಡು ಸಿದ್ಧರ ಹೋರಾಟ... ಗೋಳು ಕೇಳಬೇಕಿದೆ

* ಸುಡುಗಾಡು ಸಿದ್ಧರಿಂದ ನಿವೇಶನಕ್ಕಾಗಿ, ಮೂಲಸೌಕರ್ಯಕ್ಕಾಗಿ ಬೀದಿಗಿಳಿದು ಹೋರಾಟ
* ಕಥೆ ಹೇಳುತ್ತಾ, ಹಾಡು ಹಾಡುವ ಮೂಲಕ ನೋವು ಹೇಳಿಕೊಂಡ ಸುಡ್ಡುಗಾಡು ಸಿದ್ಧ ಮಹಿಳೆಯರು
* ಗುಡಿಸಲು ‌ಮುಕ್ತ ಮಾಡುವಂತೆ ಸುಡ್ಡುಗಾಡು ಸಿದ್ಧರ ಮನವಿ; ಗುಡಿಸಲು ಹಾಕಿಕೊಂಡು ಪ್ರತಿಭಟನೆ
* ಅತ್ತ ಕೂಲಿಯೂ ಇಲ್ಲ..ಇತ್ತ ಭಿಕ್ಷೆಯೂ ಸಿಗದೇ ಜೀವನ ಸಾಗಿಸಲು ಸುಡುಗಾಡು ಸಿದ್ಧರ ಪರದಾಟ

First Published Oct 21, 2021, 6:32 PM IST | Last Updated Oct 21, 2021, 6:32 PM IST

ರಾಯಚೂರು(ಅ.21)  ಗಂಡಸರು ಮಸಣ ಕಾಯುವ ವೃತ್ತಿ ಮಾಡಿದ್ರೆ, ಹೆಣ್ಣು ಮಕ್ಕಳು ಹಾಡು ಮತ್ತು ಕಥೆಗಳು ಹೇಳುತ್ತಾ ಭಿಕ್ಷೆ ಬೇಡಿ ಜೀವನ ನಡೆಸುತ್ತಿದ್ದರು. ಆದ್ರೆ ಈಗ ಸರ್ಕಾರ (Karnataka Govt) ಭಿಕ್ಷಾಟನೆ ನಿಷೇಧ ಮಾಡಿದೆ. ಸರ್ಕಾರ ಮಾತ್ರ ಅವರಿಗೆ ನೀಡಬೇಕಾದ ಸವಲತ್ತುಗಳು ನೀಡದೇ ಇರುವರಿಂದ ಅವರು ಊರೂರು ಅಲೆಯುತ್ತಿದ್ದಾರೆ. 

ಬೀದಿ ಬೀದಿಯಲ್ಲಿ ಹಾಡು ಹಾಡುತ್ತಾ ಭಿಕ್ಷೆ ಬೇಡುತ್ತಿರುವ (Woman) ಮಹಿಳೆಯರು..ಮತ್ತೊಂದು ಕಡೆ ಮಕ್ಕಳ (Children) ಜೊತೆಗೆ ಗುಡಿಸಲು ಹಾಕಿಕೊಂಡು ಹೋರಾಟ ಕುಳಿತ ತಾಯಿಯಂದಿರು. ಇನ್ನೊಂದು ಕಡೆ ತಮ್ಮ ಸಮಸ್ಯೆಗಳನ್ನ ಹಾಡಿನಲ್ಲಿ ಹೇಳುತ್ತಿರುವ ಅಜ್ಜಿಯರು. ಈ ಎಲ್ಲಾ ದೃಶ್ಯಗಳು ಕಂಡು ಬಂದಿದ್ದು ರಾಯಚೂರು(Raichur) ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರಿನ ಮೈದಾನದಲ್ಲಿ.

ಬೆಂಗಳೂರು ಉಸ್ತುವಾರಿಗಾಗಿ ಬಿಗ್ ಫೈಟ್

ಯೆಸ್..ಇವರು ಸುಡುಗಾಡು ಸಿದ್ಧ (Sudugadu Sidda) ಸಮುದಾಯದವರು. ಕಳೆದ 75 ವರ್ಷಗಳಿಂದ ರಾಯಚೂರು ಜಿಲ್ಲೆಯ ವಿವಿಧ ಕಡೆಗಳಲ್ಲಿ 12 ಸಾವಿರಕ್ಕೂ ಅಧಿಕ ಜನರು  ವಾಸವಾಗಿದ್ದಾರೆ. ಅಲೆಮಾರಿ ಸಮುದಾಯದವರು ಆದ ಸಿದ್ಧರೂ ಹಲವು ವರ್ಷಗಳಿಂದ ಕುಲಕಸುಬು ಮಾಡುತ್ತಾ ಮಸಣದಲ್ಲಿ ಜೀವನ ನಡೆಸುತ್ತಿದ್ರು. ಆದ್ರೆ ಇತ್ತೀಚಿಗೆ ಮಸಣಗಳಲ್ಲಿಯೂ ಇವರಿಗೆ ಜಾಗ ಸಿಗದೇ ಇರುವುದರಿಂದ ಊರೂರು ಅಲೆಯುತ್ತಾ  ಭಿಕ್ಷೆ ಬೇಡುತ್ತಾ, ಕೂಲಿ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇಂತಹ ಅಲೆಮಾರಿ ಸಮುದಾಯಗಳಿಗಾಗಿ ಸರ್ಕಾರ ಹಲವು ಯೋಜನೆಗಳು ಜಾರಿಗೆ ತಂದಿದೆ. ಆದ್ರೆ ಸಿದ್ಧ ಸಮುದಾಯಕ್ಕೆ ಮಾತ್ರ ಸರ್ಕಾರದ ಯೋಜನೆಗಳು ಸಿಗದೇ ಅಲೆಮಾರಿ ಜೀವನವೇ ನಡೆಸಿದ್ದಾರೆ. ಹೀಗಾಗಿ ನಮಗೆ ನಿವೇಶನ ಕೊಡಿ ಅಂತ ಸುಡುಗಾಡು ಸಿದ್ಧ ಸಮುದಾಯವರು ಹೋರಾಟದ ದಾರಿ ಹಿಡಿದಿದ್ದಾರೆ.

ಅಲೆಮಾರಿ ಸಮುದಾಯಕ್ಕೆ ಸೇರಿದ ಸುಡುಗಾಡು ಸಿದ್ಧರು ನಮಗೂ ನಿವೇಶನ ನೀಡಿ, ಸರ್ಕಾರದ ಸವಲತ್ತುಗಳು ನೀಡಿ ಅಂತ ಹೋರಾಟ ನಡೆಸಿದ್ದಾರೆ. ಸರ್ಕಾರ ಇವರ ಹೋರಾಟಕ್ಕೆ ಸ್ಪಂದಿಸಿ ಅಲೆಮಾರಿಗಳ ಕುಟುಂಬಗಳಿಗೆ ಬೇಕಾದ ಮೂಲಸೌಕರ್ಯ ಒದಗಿಸಬೇಕಾಗಿದೆ.