Asianet Suvarna News Asianet Suvarna News

ಬರಿ ಕಟ್ಟಡ, ಬೋರ್ಡ್‌, ಪ್ರಿನ್ಸಿಪಾಲ್‌ಗೆ ಸೀಮಿತವಾದ ಚಾಮರಾಜನಗರ ಕಾನೂನು ಕಾಲೇಜು, ಆರಂಭ ಯಾವಾಗ..?

ಎಲ್ಲ ಅಂದು ಕೊಂಡಂತೆ ಆಗಿದ್ದರೆ ಈಗಾಗಲೇ ಅಲ್ಲಿ ಕಾನೂನು ಪದವಿ ಕಾಲೇಜು ಆರಂಭವಾಗಿ 40 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡ ಬೇಕಾಗಿತ್ತು. ವಿದ್ಯಾರ್ಥಿಗಳಿಗೆ ಬೇಕಾದ ಕಟ್ಟಡವನ್ನೂ ನಿರ್ಮಿಸಲಾಗಿತ್ತು. ಅಲ್ಲಿಗೆ ನಿಯೋಜಿತ ಪ್ರಾಂಶುಪಾಲರನ್ನೂ ನೇಮಕ ಮಾಡಲಾಗಿತ್ತು.

ಗಡಿನಾಡು ಚಾಮರಾಜನಗರದಲ್ಲಿ ಸರ್ಕಾರಿ ಕಾನೂನು ಕಾಲೇಜು ಆರಂಭಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನುಮೋದ ನೀಡಿತ್ತು. ನಂತ್ರ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಜೆಟ್ ನಲ್ಲಿ 1 ಕೋಟಿ ರುಪಾಯಿ ಮೀಸಲಿರಿಸಿ ಅಲ್ಪ ಪ್ರಮಾಣದ ಹಣ ಕೂಡ ಬಿಡುಗಡೆ ಮಾಡಿತ್ತು. ಸದ್ಯಕ್ಕೆ ತಾತ್ಕಾಲಿಕ ಕಟ್ಟಡದಲ್ಲಿ ಕಾಲೇಜು ಆರಂಭಿಸೋಣ ಎಂಬ ದೃಷ್ಟಿಯಿಂದ ರೇಷ್ಮೇಗೂಡು ಮಾರುಕಟ್ಟೆಯ ಬಳಿ ಇದ್ದ ಕಟ್ಟಡವನ್ನ ನವೀಕರಿಸಿ, ಕಾಲೇಜು ಆರಂಭಿಸುವುದಕ್ಕೆ ಸಿದ್ದತೆ ಮಾಡಿ ಕೊಳ್ಳಲಾಗಿತ್ತು.

ಕೊಪ್ಪಳ: ತಳಕಲ್ ಎಂಜಿನೀಯರಿಂಗ್ ಕಾಲೇಜಿಗೆ ಕೆಇಟಿ ಭಾಗ್ಯ..!

ತರಗತಿ ಆರಂಭಿಸಲು ಬೇಕಾದ ಪಿಠೋಪಕರಣಗಳ ಖರೀದಿ ಕಾರ್ಯಕೂಡ ನಡೆದಿತ್ತು. ಜೊತೆಗೆ ಕಾಲೇಜಿಗೆ ಓರ್ವ ಪ್ರಾಂಶುಪಾಲರನ್ನೂ ನೇಮಕ ಮಾಡಲಾಗಿತ್ತು. ಕಟ್ಟಡದ ಪರಿಶೀಲನೆಗಾಗಿ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯದ ಸ್ಥಳೀಯ ತಪಾಸಣ ಸಮಿತಿ ಭೇಟಿ ನೀಡಿ ಕಾಲೇಜು ಆರಂಭಿಸಲು ಬೇಕಾದ ಅಗತ್ಯ ಸೌಲಭ್ಯ ಮತ್ತು ಕೊಠಡಿಯ ಪರಿಶೀಲನೆ ಮಾಡಿ ಹೋಗಿತ್ತು. ಎಲ್ಲವೂ ಓಕೆ ಆದ ಮೇಲೆಯೇ ಕಟ್ಟಡದ ಮೇಲೆ ಸರ್ಕಾರಿ ಕಾನೂನು ಕಾಲೇಜು ಎಂದು ನಾಮಫಲಕ ಕೂಡ ಹಾಕಲಾಗಿತ್ತು. ತರಗತಿ ಆರಂಭಿಸಲು ಬೇಕಾದ ಉಪನ್ಯಾಸಕರ ನೇಮಕಕ್ಕೆ ಬೇಕಾದ ಅಫ್ರೂವಲ್ ಸಚಿವ ಸಂಪುಟದಲ್ಲಿ ಸಿಗಬೇಕಾಗಿತ್ತು. ಅಷ್ಟೋತ್ತಿಗೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಿದ್ದು ಹೋಗಿದ್ದರಿಂದ ಕಾನೂನು ಕಾಲೇಜು ಆರಂಭವಾಗಲು ವಿಘ್ನ ಎದುರಾಗಿದೆ. 

ಬಿರುಕು ಬಿಟ್ಟ ಸರ್ಕಾರಿ ಶಾಲೆ; ಮನೆಯಲ್ಲೇ ಶಿಕ್ಷಕರ ಪಾಠ!

ಅನುಮೋದನೆ ದೊರೆತು ನಾಲ್ಕು ವರ್ಷಗಳಾದ್ರು ಇನ್ನೂ ಆರಂಭಗೊಳ್ಳದೆ ಇರುವುದರಿಂದ ವಿಧ್ಯಾರ್ಥಿಗಳು ನಿರಾಸೆಗೊಂಡಿದ್ದಾರೆ. ಹೀಗಾಗಿ ಕಾನೂನು ಪದವಿ ವಿದ್ಯಾಭ್ಯಾಸಕ್ಕೆ ನೆರೆಯ ಮೈಸೂರು, ಮಂಡ್ಯ ಜಿಲ್ಲೆಗೆ ದುಬಾರಿ ಶುಲ್ಕ ಕಟ್ಟಿ ಖಾಸಗಿ ಕಾಲೇಜಿಗೆ  ಹೋಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಕೂಡಲೆ ಚಾಮರಾಜನಗರದಲ್ಲಿ ಸರ್ಕಾರಿ ಕಾನೂನು ಕಾಲೇಜು ಪ್ರಾರಂಭಿಸಿ ಜಿಲ್ಲೆಯಾದ್ಯಂತ ಇರುವ ಬಡ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಲಿ  ಎಂಬುದು ಕಾನೂನು ವಿಧ್ಯಾರ್ಥಿಗಳ ಒತ್ತಾಯ.

 

Video Top Stories