ಬಿಗ್ 3 ಇಂಪ್ಯಾಕ್ಟ್: ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಧನ್ಯವಾದ ಸರ್ಮಪಿಸಿದ ವಿದ್ಯಾರ್ಥಿಗಳು
ಸರ್ಕಾರ ಶಾಲೆಯ ದುಸ್ಥಿತಿ ಬಗ್ಗೆ ವರದಿ ಪ್ರಸಾರ ಮಾಡಿದ್ದ ಏಷ್ಯಾನೆಟ್ ಸುವರ್ಣ ನ್ಯೂಸ್| ಸಂಬಂಧಪಟ್ಟ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದ ಬಿಗ್ 3 ತಂಡ|
ತುಮಕೂರು(ಡಿ.10): 2019 ರ ನ. 8 ರಂದು ನಗರದ ಬಡ್ಡಿಹಳ್ಳಿ ಕೆರೆಯ ನೀರಿನಿಂದ ಸರ್ಕಾರಿ ಶಾಲೆ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಶಾಲೆಯ ಸುತ್ತಮುತ್ತ ಕೆರೆಯ ನೀರು ನಿಂತು ಮಕ್ಕಳು ಶಾಲೆಯ ಒಳಗಡೆ ಹೋಗದೆ ಪರಿಸ್ಥಿತಿ ನಿರ್ಮಾಣಚಾಗಿತ್ತು. ಅಂದು ಈ ಬಗ್ಗೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನ ಬಿಗ್ 3 ಕಾರ್ಯಕ್ರಮದಲ್ಲಿ ವರದಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿತ್ತು.
'ಜೆಡಿಎಸ್ ನಾಟಕ ಕಂಪನಿ, ಎಚ್‌ಡಿಕೆ ಅದ್ರ ಬಾಸ್, ಅವರ ಸಿನಿಮಾ ಡೈಲಾಗ್‌ಗೆಲ್ಲಾ ನಾವು ಬಗ್ಗಲ್ಲ'
ಇದೀಗ ಏಷ್ಯಾನೆಟ್ ಸುವರ್ಣ ನ್ಯೂಸ್ ವರದಿಯ ಬಳಿಕ ಎಚ್ಚೆತ್ತುಕೊಂಡ ಅಧಿಕಾರಿಗಳು ಸುಸಜ್ಜಿತವಾದ ಶಾಲೆಯ ಕಟ್ಟಡ ನಿರ್ಮಾಣವಾಗುತ್ತಿದೆ. ಹೀಗಾಗಿ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಬಿಗ್ 3 ತಂಡಕ್ಕೆ ಧನ್ಯವಾದಗಳನ್ನ ತಿಳಿಸಿದ್ದಾರೆ.