Asianet Suvarna News Asianet Suvarna News

Chikkamagaluru Temple : ಬೇಡಿದ ವರ ಈಡೇರಿಸುವ ಭಕ್ತರ ಪಾಲಿನ ಕರುಣಾಮಯಿ ಈ ನಂದಿ

 ಚಿಕ್ಕಮಗಳೂರಿನ ಶೃಂಗೇರಿ ತಾಲೂಕು ಕಿಗ್ಗಾದಲ್ಲಿ ಇರುವ ಋಷ್ಯ ಶೆಂಗೇಶ್ವರ ಸ್ವಾಮಿ ದೇಗುಲ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವಂತದ್ದಾಗಿದೆ.  ಈ ದೇವರು- ಹಾಗು ಇಲ್ಲಿರುವ ನಂದಿ ತಮ್ಮನ್ನು ನಂಬಿ ನಂಬಿ ಬಂದ ಭಕ್ತರಿಗೆ ಬೇಡಿದ ವರಗಳನ್ನು ಕರುಣಿಸುತ್ತಾರೆ ಎನ್ನುವ ನಂಬಿಕೆ ಭಕ್ತರಲ್ಲಿದೆ. 

 ಚಿಕ್ಕಮಗಳೂರು (ನ.26): ಚಿಕ್ಕಮಗಳೂರಿನ (Chikkamagaluru) ಶೃಂಗೇರಿ (Sringeri) ತಾಲೂಕು ಕಿಗ್ಗಾದಲ್ಲಿ ಇರುವ ಋಷ್ಯ ಶೃಂಗೇಶ್ವರ ಸ್ವಾಮಿ ದೇಗುಲ ಅತ್ಯಂತ ಪ್ರಸಿದ್ಧಿಯನ್ನು ಪಡೆದಿರುವಂತದ್ದಾಗಿದೆ.  ಈ ದೇವರು- ಹಾಗು ಇಲ್ಲಿರುವ ನಂದಿ (nandi) ತಮ್ಮನ್ನು ನಂಬಿ ನಂಬಿ ಬಂದ ಭಕ್ತರಿಗೆ (Devotees) ಬೇಡಿದ ವರಗಳನ್ನು ಕರುಣಿಸುತ್ತಾರೆ.  ಇಲ್ಲಿನ ನಂದಿಗೆ ಹರಕೆ ಹೊತ್ತರೆ ಮಾತುಬಾರದ ಮಕ್ಕಳಿಗೂ ಮಾತುಬರುತ್ತದೆ ಎನ್ನುವ ನಂಬಿಕೆ ಇದೆ. ದೇಗುಲಕ್ಕೆ (Temple) ಭೇಟಿ ನೀಡಿ ಬೆಣ್ಣೆಯಿಂದ ಅಲಂಕಾರ ಮಾಡುವ ರೂಢಿ ಇದ್ದು, ದಿನವೂ ಬೆಣ್ಣೆ ವಿಳ್ಯದೆಲೆಯಿಂದ ಈ ಬಸವ ಅಲಂಕಾರಗೊಳ್ಳುತ್ತಾನೆ. ಬೇಡಿದ ವರಗಳನ್ನು ಈಡೇರಿಸುವ ಕಲ್ಪವೃಕ್ಷ ಎಂದೇ ಕರೆಸಿಕೊಳ್ಳುತ್ತಾನೆ.

ಮಳೆ ನಿಲ್ಲಲು ಮಳೆದೇವರ ಮೊರೆಹೋದ ರಾಜೇಗೌಡ : ಋುಷ್ಯ ಶೃಂಗೇಶ್ವರದಲ್ಲಿ ವಿಶೇಷ ಪೂಜೆ 

ಚಿಕ್ಕಮಕ್ಕಳಿಂದ- ದೊಡ್ಡವರವರೆಗೂ ಇಲ್ಲಿ ಹರಕೆ ಹೊರುತ್ತಾರೆ. ಬರಗಾಲವಾಗಲಿ, ಅತಿವೃಷ್ಟಿಯಾಗಲಿ ಎಲ್ಲದಕ್ಕೂ ಪರಿಹಾರ ನೀಡುವ ಋಷ್ಯಶೃಂಗೇಶ್ವರ ಸ್ವಾಮೀ  ಭಕ್ತರ ಪಾಲಿಗೆ ನಂಬಿಕಸ್ತ ದೇವರು. ರಾಜ್ಯದ ಮುಖ್ಯಮಂತ್ರಿಗಳಿಂದ- ಜನಸಾಮಾನ್ಯನ ಆದಿಯಾಗಿ ಎಲ್ಲರೂ ಇಲ್ಲಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಎಲ್ಲರೂ ತಮ್ಮ ವೈಯಕ್ತಿಕ ಕಷ್ಟನಷ್ಟಗಳನ್ನು ಇಲ್ಲಿ ಹೇಳಿಕೊಳ್ಳುತ್ತಾರೆ.