Asianet Suvarna News Asianet Suvarna News

ಸುಂದರ ಸಿರಿಮನೆ ಫಾಲ್ಸ್‌ಗೆ ಸದ್ಯ ಪ್ರವಾಸಿಗರಿಗೆ ನಿಷೇಧ

ಬೃಹದಾಕಾರದ ಬಂಡೆಗಳ ನಡುವೆ ಭೋರ್ಗರೆತದ ಶಬ್ದ, ಹೊಲ್ನೊರೆಯಂತೆ ಧುಮ್ಮಿಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯ, ಜೊತೆಗೆ ಸುತ್ತಲೂ  ಹಚ್ಚಹಸಿರಿನ ಕಾನನ.. ಹೌದು... ದಟ್ಟಕಾನನದ ಮಧ್ಯೆ ಧುಮ್ಮಿಕ್ತಿರೋ ಈ ಜಲಪಾತ ಸಿರಿಮನೆ ಫಾಲ್ಸ್. ಸದ್ಯ ಈ ಫಾಲ್ಸ್‌ಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. 

ಶೃಂಗೇರಿ (ಜು.25): ಬೃಹದಾಕಾರದ ಬಂಡೆಗಳ ನಡುವೆ ಭೋರ್ಗರೆತದ ಶಬ್ದ, ಹೊಲ್ನೊರೆಯಂತೆ ಧುಮ್ಮಿಕ್ಕುವ ಮನಮೋಹಕ ಜಲಪಾತದ ದೃಶ್ಯ ಕಾವ್ಯ, ಜೊತೆಗೆ ಸುತ್ತಲೂ  ಹಚ್ಚಹಸಿರಿನ ಕಾನನ.. ಹೌದು... ದಟ್ಟಕಾನನದ ಮಧ್ಯೆ ಧುಮ್ಮಿಕ್ತಿರೋ ಈ ಜಲಪಾತ ಸಿರಿಮನೆ ಫಾಲ್ಸ್. 

ಬೆಳಗಾವಿ: ಗೋಕಾಕ ಫಾಲ್ಸ್‌ ವೀಕ್ಷಣೆಗೆ ಮತ್ತೆ ಬ್ರೇಕ್‌..!

ಸುಮಾರು 90 ರಿಂದ 100 ಅಡಿ ಎತ್ತರದಿಂದ ಬೀಳೋ ಈ ಗಂಗಾಮಾತೆಗೆ ಪ್ರವಾಸಿಗರು ಮಿನಿ ಜೋಗ ಎಂದೂ ಹೆಸರಿಟ್ಟಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನಲ್ಲಿರೋ ಈ ಫಾಲ್ಸ್ಗೆ ಶೃಂಗೇರಿಯಿಂದ ಕೇವಲ 18 ಕಿ.ಮೀ. ದೂರ. ಒಮ್ಮೆ ಈ ಸ್ಥಳಕ್ಕೆ ಬಂದು ನೋಡಿದ್ರೆ ಎಷ್ಟೆ ದೂರದಿಂದ ಬಂದಿದ್ರು ಆಯಾಸವೆಲ್ಲಾ ಮಂಗಮಾಯ.  ಆದರೆ ಸದ್ಯ ಜಲಪಾತ ನೋಡುವ ಭಾಗ್ಯ ಪ್ರವಾಸಿಗರಿಂದ ದೂರವಾಗಿದೆ. ಸಿರಿಮನೆ ಜಲಪಾತದ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ದಿ ಉದ್ದೇಶದಿಂದ ಜಿಲ್ಲಾಡಳಿತ ಪ್ರವಾಸಿಗರಿಗೆ ನಿಷೇಧ ಹೇರಿದೆ.

Video Top Stories