Shivamogga: ಹೊಸತನವಿಲ್ಲ, ಬೆಳೆಗಳ ಬಗ್ಗೆ ಸೂಕ್ತ ಮಾಹಿತಿಯಿಲ್ಲ, ಕಾಟಾಚಾರಕ್ಕೆ ಕೃಷಿ ಮೇಳ?
ನಾಲ್ಕಾರು ಜಿಲ್ಲೆಗಳ ಕೃಷಿ ಉಪಕರಣ ಮತ್ತು ತಳಿ ಪ್ರಾತ್ಯಕ್ಷಿತೆ ಹೆಸರಿನಲ್ಲಿ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿವಿ ಆಯೋಜಿಸಿದ್ದ ಮೇಳದ ವಿರುದ್ಧ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಶಿವಮೊಗ್ಗ (ನ. 19): ನಾಲ್ಕಾರು ಜಿಲ್ಲೆಗಳ ಕೃಷಿ ಉಪಕರಣ ಮತ್ತು ತಳಿ ಪ್ರಾತ್ಯಕ್ಷಿತೆ ಹೆಸರಿನಲ್ಲಿ ಶಿವಮೊಗ್ಗದ (Shivamogga) ಕೃಷಿ ಮತ್ತು ತೋಟಗಾರಿಕಾ ವಿವಿ ಆಯೋಜಿಸಿದ್ದ ಮೇಳದ (Krishi Mela) ವಿರುದ್ಧ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಯಾವುದೇ ಹೊಸತನವಿಲ್ಲದೆ ರೈತರಿಗೆ ಅಗತ್ಯವಾದ ನೂತನ ಅವಿಷ್ಕಾರ , ಕೃಷಿ ಬೆಳೆಗಳು, ತರಕಾರಿ , ದ್ವಿದಳ ಬೆಳೆಗಳು , ಬಹು ಬೆಳೆ ಕೃಷಿ ಮೊದಲಾದವುಗಳ ಬಗ್ಗೆ ಸೂಕ್ತ ಮಾಹಿತಿ ಸಿಗದೇ ದೂರದೂರದ ಬಂದಿದ್ದ ರೈತರು ಬೇಸರ ಪಡುವಂತಾಯಿತು.
Chitradurga: ಬೆಳೆ ಬಿತ್ತನೆಗೆ ಖರ್ಚು ಮಾಡೋದು 70 ಸಾವಿರ, ವಿಮೆ ಬರೋದು 7 ಸಾವಿರ, ರೈತರ ಆಕ್ರೋಶ
ಕೃಷಿ ಮೇಳದಲ್ಲಿ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಕೃಷಿ, ತೋಟಗಾರಿಕೆ, ಕೃಷಿ ವಿಜ್ಞಾನ ಕೇಂದ್ರಗಳು, ಪಶುಸಂಗೋಪನೆ, ಕಾನೂ ಸೇವಾ ಪ್ರಾಧಿಕಾರ ಸೇರಿದಂತೆ ವಿವಿಧ ಇಲಾಖೆಗಳ ಒಟ್ಟು 36 ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ರೈತರ, ಸಾರ್ವಜನಿಕರ ಗಮನ ಸೆಳೆಯುವಲ್ಲಿ ವಿಫಲವಾಯ್ತು. ಶಿವಮೊಗ್ಗದ ಕೃಷಿ ಮೇಳ ರೈತರ ಸಮಸ್ಯೆಗಳಿಗೆ ಪರಿಹಾರವನ್ನಾಗಲಿ , ಹೊಸತನದ ಕೃಷಿ ಅವಿಷ್ಕಾರಕ್ಕಾಗಲಿ ಮನ್ನಣೆ ನೀಡದೇ ಕೇವಲ ವಾರ್ಷಿಕ ಅನುದಾನದ ಖರ್ಚು ಮಾಡಲಷ್ಟೇ ತರಾತುರಿಯಲ್ಲಿ ಆಯೋಜಿಸಿದಂತಿತ್ತು ಎಂದು ಅಸಮಾಧಾನ ವ್ಯಕ್ತವಾಗಿದೆ.