ಕೊರೊನಾ ವಾಕ್ಸಿನ್ ಕೇಳಿದ್ದಕ್ಕೆ ದುರ್ವತನೆ ತೋರಿದ ಸರ್ಕಾರಿ ವೈದ್ಯ

ವ್ಯಾಕ್ಸಿನ್‌ಗಾಗಿ ಬಂದಿದ್ದ ಬಾಲಕನನ್ನು ಸರ್ಕಾರಿ ವೈದ್ಯರೋರ್ವರು ಮನ ಬಂದಂತೆ ನಿಂದಿಸಿದ್ದಲ್ಲದೇ ಇದನ್ನು ಪ್ರಶ್ನೆ ಮಾಡಿದ ತಂದೆಗೂ ಕೆಟ್ಟ ಪದಗಳನ್ನು ಉಪಯೋಗಿಸಿದ ಘಟನೆ ನಡೆದಿದೆ. 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರದ ಆರೋಗ್ಯ ಕೇಂದ್ರದಲ್ಲಿ ಕ್ಷುಲ್ಲಕ ಕಾರಣ ಕೊಟ್ಟು ವ್ಯಾಕ್ಸಿನ್ ನೀಡದೆ ವಾಪಾಸ್ಸು ಕಳುಹಿಸಿದ ಬಗ್ಗೆ ಹುಡುಗನ ತಂದೆ ಸ್ಪಷ್ಟನೆ ಕೇಳಿದ್ದಕ್ಕೆ ಬೇಕಾಬಿಟ್ಟಿ ನಿಂದನೆ ಮಾಡಲಾಗಿದೆ. ಡಾ.ಪ್ರಣೀತ್ ಎಂಬಾತ ಇಲ್ಲಿನ ಹಿರಿಯ ಕಲಾವಿದರೋರ್ವರರು ಹಾಗೂ ಅವರ ಪುತ್ರನನ್ನು ನಿಂದಿಸಿದ ಘಟನೆ ನಡೆದಿದೆ. ಇನ್ನು ಈ ಬಗ್ಗೆ ದೂರು ನೀಡಿದರೂ ಜಿಲ್ಲಾ ಆರೋಗ್ಯಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ.

First Published Aug 20, 2021, 2:38 PM IST | Last Updated Aug 20, 2021, 8:27 PM IST

ಶಿವಮೊಗ್ಗ (ಆ.20): ವ್ಯಾಕ್ಸಿನ್‌ಗಾಗಿ ಬಂದಿದ್ದ ಬಾಲಕನನ್ನು ಸರ್ಕಾರಿ ವೈದ್ಯರೋರ್ವರು ಮನ ಬಂದಂತೆ ನಿಂದಿಸಿದ್ದಲ್ಲದೇ ಇದನ್ನು ಪ್ರಶ್ನೆ ಮಾಡಿದ ತಂದೆಗೂ ಕೆಟ್ಟ ಪದಗಳನ್ನು ಉಪಯೋಗಿಸಿದ ಘಟನೆ ನಡೆದಿದೆ. 

ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ನಗರದ ಆರೋಗ್ಯ ಕೇಂದ್ರದಲ್ಲಿ ಕ್ಷುಲ್ಲಕ ಕಾರಣ ಕೊಟ್ಟು ವ್ಯಾಕ್ಸಿನ್ ನೀಡದೆ ವಾಪಾಸ್ಸು ಕಳುಹಿಸಿದ ಬಗ್ಗೆ ಹುಡುಗನ ತಂದೆ ಸ್ಪಷ್ಟನೆ ಕೇಳಿದ್ದಕ್ಕೆ ಬೇಕಾಬಿಟ್ಟಿ ನಿಂದನೆ ಮಾಡಲಾಗಿದೆ. ಡಾ.ಪ್ರಣೀತ್ ಎಂಬಾತ ಇಲ್ಲಿನ ಹಿರಿಯ ಕಲಾವಿದ ನಾಗರಾಜ ಉಡುಪ ಹಾಗೂ ಅವರ ಪುತ್ರನನ್ನು ನಿಂದಿಸಿದ ಘಟನೆ ನಡೆದಿದೆ. ಇನ್ನು ಈ ಬಗ್ಗೆ ದೂರು ನೀಡಿದರೂ ಜಿಲ್ಲಾ ಆರೋಗ್ಯಾಧಿಕಾರಿ ಯಾವುದೇ ಕ್ರಮ ಕೈಗೊಂಡಿಲ್ಲ.

56.64 ಕೋಟಿ ದಾಟಿತು ಭಾರತದ ಲಸಿಕಾ ಅಭಿಯಾನ; 3 ಅಲೆ ನಿಯಂತ್ರಣಕ್ಕೆ ಕೇಂದ್ರದ ಕ್ರಮ!

ಕೊರೊನಾ ವಾಕ್ಸಿನ್ ಬಗ್ಗೆ ಕೇಳಿದ್ದೆ ಮಹಾಪರಾಧ ಎಂಬಂತೆ ದುರ್ವತನೆ ತೋರಿದ ಸರ್ಕಾರಿ ವೈದ್ಯಗೆ ಪ್ರಶ್ನೆ ಮಾಡಿದ್ದಕ್ಕೆ  ಕೆಟ್ಟ ಭಾಷೆ ಬಳಸಿದ್ದಾರೆ. ಅಲ್ಲದೇ ಸಲ್ಲದ ಕಾರಣ ಹೇಳಿ ಲಸಿಕೆ ನೀಡದೇ ಹಿಂದೆ ಕಳುಹಿಸಿದ್ದಾರೆ.   ಕೋವಿಡ್ ಲಸಿಕೆಯ ಬಗ್ಗೆ ಸರ್ಕಾರಿ ಗೈಡ್ ಲೈನ್  ನಲ್ಲಿ ಏನೇನಿದೆ ಎಂಬ ಬಗೆಗೂ ಸಾಕಷ್ಟು ತಿಳಿದುಕೊಂಡೆ ಕರೆ ಮಾಡಿದ್ದರು ಈ ರೀತಿ ವರ್ತಿಸಿರುವುದು ಜನಾಕ್ರೋಶಕ್ಕೆ ಕಾರಣವಾಗಿದೆ. 

ಜನಸ್ನೇಹಿ ಅಲ್ಲದ , ಕೊರೊನಾ ಸಂಕಷ್ಟದ ಸಮಯದಲ್ಲಿ ಸಾರ್ವಜನಿಕರಿಗೆ ಸ್ಪಂದಿಸದ ಸರ್ಕಾರಿ ವೈದ್ಯ ದುರ್ವತನೆ ಬಗ್ಗೆ ಡಿಹೆಚ್ಓ ಡಾ ರಾಜೇಶ್ ಸುರಗಿಹಳ್ಳಿ ಅವರಿಗೆ ದೂರು ನೀಡಿ 20 ದಿನಗಳೇ ಕಳೆದರೂ ಇನ್ನೂ ಕ್ರಮ ಕೈಗೊಂಡಿಲ್ಲ.   

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona