Asianet Suvarna News Asianet Suvarna News

ಸಂತ್ರಸ್ತನ ವೈದ್ಯಕೀಯ ಪರೀಕ್ಷೆ ಮುಕ್ತಾಯ: 15 ರೀತಿಯ ಟೆಸ್ಟ್ ಮಾಡಿ ಮುಗಿಸಿದ ವೈದ್ಯರು!

ಸೂರಜ್ ರೇವಣ್ಣ ಸಂಲಿಂಗ ಲೈಂಗಿಕ ಆರೋಪ ಪ್ರಕರಣದಲ್ಲಿ ಸಂತ್ರಸ್ತನಾಗಿರುವ ವೈಕ್ತಿಯ ವೈದ್ಯಕೀಯ ಪರೀಕ್ಷೆಯನ್ನು ಮಾಡಿ ಮುಗಿಸಲಾಗಿದೆ.

ಸೂರಜ್ ರೇವಣ್ಣ ಸಂಲಿಂಗ ಲೈಂಗಿಕ ಆರೋಪ ಪ್ರಕರಣದಲ್ಲಿ(Sexual assault allegation case) ಸಂತ್ರಸ್ತನಾಗಿರುವ(Victim) ವ್ಯಕ್ತಿಯ ವೈದ್ಯಕೀಯ ಪರೀಕ್ಷೆ(Medical test) ಮುಕ್ತಾಯವಾಗಿದೆ. 15 ರೀತಿಯ ಟೆಸ್ಟ್‌ಗಳನ್ನು ಪೊಲೀಸರು ಮಾಡಿ ಮುಗಿಸಿದ್ದಾರೆ. ಫಾರೆನ್ಸಿಕ್ ಡಾಕ್ಟರ್ ಸತೀಶ್, ಸರ್ಜನ್ ಭರತ್‌ರಿಂದ ಸಂತ್ರಸ್ತನಿಗೆ ವೈದ್ಯಕೀಯ ಪರೀಕ್ಷೆ ಮಾಡಿಸಲಾಗಿದೆ. ಸದ್ಯ ಸಂತ್ರಸ್ತನಿಂದ ಘಟನೆ ಬಗ್ಗೆ  ಮಾಹಿತಿ ಪಡೆದು ವೈದ್ಯರು ದಾಖಲಿಸಿಕೊಳ್ತಿದ್ದಾರೆ. ಘಟನೆ ಯಾವ ರೀತಿ ನಡೆಯಿತು? ಎಲ್ಲಿ ನಡೆಯಿತು? ಸೂರಜ್ ನಿಮಗೆ ಎಲ್ಲಿ ಪರಿಚಯ ಆದ್ರು? ಹೇಗೆ ಪರಿಚಯ ಆದ್ರು? ಯಾವ ರೀತಿ ನಿಮ್ಮ ಮೇಲೆ ದೌರ್ಜನ್ಯ ನಡೆಯಿತು ಅನ್ನೋ ಮಾಹಿತಿ ಪಡೆದು ದಾಖಲಿಸಿಕೊಳ್ಳಲಾಗುತ್ತಿದೆ. ಬರವಣಿಗೆ ಮೂಲಕ ಸಂತ್ರಸ್ತನ ಹೇಳಿಕೆಯನ್ನು ವೈದ್ಯರು ದಾಖಲಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಸೂರಜ್‌ ರೇವಣ್ಣ ಪ್ರಕರಣ: ಹೋ ಏನಾಗಿದೆ, ಅವರು ಹಗರಣದಲ್ಲಿ ಸಿಕ್ರಾ? ಹಾಗಾದ್ರೆ ಶಿಕ್ಷೆ ಕಾದಿದೆ ಎಂದ ಜಿ.ಟಿ.ದೇವೇಗೌಡ

Video Top Stories