ಸ್ವ ಪ್ರತಿಷ್ಠೆ ಬಿಟ್ಟು ಕೆಲಸ ಮಾಡಿದ್ದಕ್ಕೆ ಇಂದು ಮೈಸೂರು ಕೊರೋನಾ ಮುಕ್ತವಾಗಿದೆ: ಡಿಸಿ
ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವುದೇ ಸ್ವ ಪ್ರತಿಷ್ಠೆ ಇಲ್ಲದೆ, ಕೆಲ ಭಿನ್ನಾಭಿಪ್ರಾಯದ ನಡುವೆಯೂ ಸತತ ಶ್ರಮ ಹಾಕಿದ್ದಾರೆ. ಮೈಸೂರಿನ ಮಹಾಜನತೆ ಸಹಕಾರದಿಂದ ಕೊರೋನಾ ಗೆಲ್ಲಲು ಸಾಧ್ಯವಾಯಿತು ಎಂದು ಜಿಲ್ಲಾಧಿಕಾರಿ ಗೆಲುವಿನ ಶ್ರೇಯವನ್ನು ಎಲ್ಲರಿಗೂ ಹಂಚಿದ್ದಾರೆ.
ಮೈಸೂರು(ಮೇ.16): ಸ್ವ ಪ್ರತಿಷ್ಠೆ ಬಿಟ್ಟು ಕೊರೊನಾದ ವಿರುದ್ಧ ಒಗ್ಗಟ್ಟಿನಿಂದ ಸೆಣೆಸಿದ್ದು ನಮಗೆ ಗೆಲುವು ತಂದುಕೊಟ್ಟಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಮ್.ಜಿ. ಜಿ.ಶಂಕರ್ ಕೊರೋನಾ ಗೆದ್ದ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ.
ಜಿಲ್ಲಾ ಮಟ್ಟದ ಅಧಿಕಾರಿಗಳು ಯಾವುದೇ ಸ್ವ ಪ್ರತಿಷ್ಠೆ ಇಲ್ಲದೆ, ಕೆಲ ಭಿನ್ನಾಭಿಪ್ರಾಯದ ನಡುವೆಯೂ ಸತತ ಶ್ರಮ ಹಾಕಿದ್ದಾರೆ. ಮೈಸೂರಿನ ಮಹಾಜನತೆ ಸಹಕಾರದಿಂದ ಕೊರೋನಾ ಗೆಲ್ಲಲು ಸಾಧ್ಯವಾಯಿತು ಎಂದು ಜಿಲ್ಲಾಧಿಕಾರಿ ಗೆಲುವಿನ ಶ್ರೇಯವನ್ನು ಎಲ್ಲರಿಗೂ ಹಂಚಿದ್ದಾರೆ.
ಸಂಕಷ್ಟದಲ್ಲಿದ್ದೇವೆ, ಪರ್ಮಿಷನ್ ಕೊಡಿ ಪ್ಲೀಸ್; ಸರ್ಕಾರಕ್ಕೆ ಹೊಟೇಲ್ ಸಂಘಗಳ ಮನವಿ
ಭಾರತದಲ್ಲಿ ಲಾಕ್ಡೌನ್ ಆಗುವ ಮುನ್ನವೇ ಮೈಸೂರಿನಲ್ಲಿ ಕೊರೋನಾ ಪತ್ತೆಕಾರ್ಯ ಶುರುವಾಗಿತ್ತು. ಅರಮನೆಯಲ್ಲಿ, ಮೃಗಾಲಯದಲ್ಲಿ ಪರೀಕ್ಷೆ ಮಾಡಲಾಗುತ್ತಿತ್ತು. ಕೊರೋನಾ ವಾರಿಯರ್ಸ್ ಪರಿಶ್ರಮ ಮತ್ತು ದೇಶಾಭಿಮಾನವೇ ಕೊರೊನಾ ಗೆಲ್ಲಲು ಕಾರಣವಾಯಿತು ಎಂದು ಮನದಾಳದ ಮಾತು ಹಂಚಿಕೊಂಡಿದ್ದಾರೆ ಅಭಿರಾಂ ಜಿ. ಶಂಕರ್.