Asianet Suvarna News Asianet Suvarna News

Kalaburagi: ಕಿಶೋರಿಯರಿಗಾಗಿ ಕೊಡುವ ಶುಚಿ ಪ್ಯಾಡ್‌ಗಳ ಅಕ್ರಮ ಸಂಗ್ರಹ..! ಎಲ್ಲಿಂದ ಬಂತು ? ಏಕೆ ಉಳಿಯಿತು ?

ಕಲಬುರಗಿಯ ಗೋಡಾನ್‌ನಲ್ಲಿ ಕಿಶೋರಿಯರಿಗಾಗಿ ಕೊಡುವ ಶುಚಿ ಪ್ಯಾಡ್‌ಗಳು ವಿತರಣೆಯಾಗದೇ ಹಾಗೆ ಉಳಿದುಕೊಂಡಿವೆ.
 

ಕಲಬುರಗಿಯ(Kalaburagi) ಗೋಡಾನ್‌ನಲ್ಲಿ ಸಾವಿರಾರು ಶುಚಿ ಪ್ಯಾಡ್‌ಗಳು(Sanitary pads) ವಿತರಣೆಯಾಗದೇ ಹಾಗೆ ಉಳಿದಿವೆ. ಈ ಘಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಅವಧಿ ಮೀರಿರುವ ಸಾವಿರಾರು ಶುಚಿ ಪ್ಯಾಡ್‌ಗಳು ಗೋದಾಮಿನಲ್ಲಿ(Godawn) ಇವೆ. ಪ್ರತಿ ತಿಂಗಳು ನೀಡಬೇಕಾದ ಪ್ಯಾಡ್‌ಗಳನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ. 2021ಕ್ ಈ ಪ್ಯಾಡ್‌ಗಳ ಅವಧಿ ಮುಗಿದಿದೆ. ಸರಕಾರದಿಂದ ಬಂದ ಶುಚಿ ಪ್ಯಾಡ್‌ಗಳು ವಿತರಣೆಯೇ ಆಗಿಲ್ಲ. ಮಹಿಳಾ , ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಿಗೆ ಈ ಬಗ್ಗೆ ಗೊತ್ತೇ ಇಲ್ವಂತೆ. ಎಲ್ಲಿಂದ ಬಂತು ? ಏಕೆ ಉಳಿಯಿತು ? ಈ ಬಗ್ಗೆ ತನಿಖೆ ಮಾಡ್ತೀವಿ ಅಂತಾರೆ ನವೀನ್. ಸರ್ಕಾರದಿಂದ ಮಂಜೂರಾದ್ರೂ ಅರ್ಹರಿಗೆ ತಲುಪುತ್ತಿಲ್ಲ. ಲಕ್ಷಾಂತರ ರೂ. ಮೌಲ್ಯದ ಶುಚಿ ಪ್ಯಾಡ್‌ಗಳು ವಿತರಿಸದೆ ಬೇಜವಾಬ್ದಾರಿ ವಹಿಸಿರುವ ಅಧಿಕಾರಿಗಳ ವಿರುದ್ಧ, ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರ ಒತ್ತಾಯಿಸುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಪಾಸ್‌ಪೋರ್ಟ್ ರದ್ದಾದ್ರೆ ವಿದೇಶದಲ್ಲೇ ಪ್ರಜ್ವಲ್ ಲಾಕ್..? ನಿಯಮ ಹೇಳೋದೇನು..?