Belagavi| ವಿರೋಧದ ನಡುವೆಯೂ ಹಲಗಾ-ಮಚ್ಛೆ ಬೈಪಾಸ್ ಕಾಮಗಾರಿ ಆರಂಭ
* ಹಲಗಾ-ಮಚ್ಛೆ ಬೈಪಾಸ್ ಕಾಮಗಾರಿಗೆ ರೈತರ ವಿರೋಧ
* ತೀವ್ರ ವಿರೋಧದ ನಡುವೆಯೂ ಕಾಮಗಾರಿ ಆರಂಭ
* 825 ರೈತರಿಗೆ ಈಗಾಗಲೇ ಪರಿಹಾರ ನೀಡಿದ ಜಿಲ್ಲಾಡಳಿತ
ಬೆಳಗಾವಿ(ನ.12): ಬೆಳಗಾವಿಯಲ್ಲಿ ಇನ್ನೂ ಆರಿಲ್ಲ ಬೈಪಾಸ್ ಕಾಮಗಾರಿ ಬೆಂಕಿ. ಹೌದು, ಹಲಗಾ-ಮಚ್ಛೆ ಬೈಪಾಸ್ ಕಾಮಗಾರಿಗೆ ರೈತರು ವಿರೋಧ ವ್ಯಕ್ತಪಡಿಸಿದ್ದರು. ನಿನ್ನೆ(ಗುರುವಾರ) ಮಚ್ಛೆ ಗ್ರಾಮದ ಬಳಿ ಬೈಪಾಸ್ ಕಾಮಗಾರಿಯನ್ನ ವಿರೋಧಿಸಿ ರೈತರು- ಮಹಿಳೆಯರು ಪ್ರತಿಭಟನೆ ನಡೆಸಿದ್ದರು. ಆದರೆ, ತೀವ್ರ ವಿರೋಧದ ನಡುವೆಯೂ ಇಂದು(ಶುಕ್ರವಾರ) ಕಾಮಗಾರಿ ಆರಂಭವಾಗಿದೆ.
ಮಚ್ಚೆ-ಹಲಗಾ ಬೈಪಾಸ್ ರಸ್ತೆಗೆ ವಿರೋಧ: ಮಹಿಳೆಯರನ್ನು ಎಳೆದಾಡಿ, ಸೀರೆ ಹರಿದು ಹಾಕಿದ ಪೊಲೀಸರು
825 ರೈತರಿಗೆ ಈಗಾಗಲೇ ಪರಿಹಾರ ನೀಡಿದೆ ಜಿಲ್ಲಾಡಳಿತ. ಇನ್ನೂ 155 ರೈತರ ವಿರೋಧ ಇದೆ, ಅವರು ಪರಿಹಾರವನ್ನ ಪಡೆದಿಲ್ಲ. ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ನಿನ್ನೆಯಿಂದಲೂ ಪ್ರತಿಭಟನೆ ನಡೆಯುತ್ತಿದೆ. ನಿನ್ನೆ ಪ್ರತಿಭಟನೆ ವೇಳೆ ಆಕಾಶ್ ಎಂಬ ರೈತ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ಸಂಬಂಧ ನಿನ್ನೆ ಸಂಜೆ ರೈತರೊಂದಿಗೆ ನಡೆದ ಸಂಧಾನ ಸಭೆ ಕೂಡ ವಿಫಲವಾಗಿತ್ತು.