ಶ್ರೀರಾಮನಿಗೂ ನಮ್ಮ ಹಂಪಿಗೂ ಅವಿನಾಭಾವ ಸಂಬಂಧ, ವಿವರ ಇಲ್ಲಿದೆ!
ಹಂಪಿಗೂ ಶ್ರೀರಾಮನಿಗೂ ಎಲ್ಲಿಲ್ಲದ ಸಂಬಂಧ/ ತ್ರೇತಾಯುಗದ ಹಲವು ಘಟನೆಗಳಿಗೆ ಹಂಪಿ ಸಾಕ್ಷಿಯಾಗಿದೆ/ ಶ್ರೀರಾಮನು ಇಲ್ಲಿ ನೆಲಸಿರೋ ಬಗ್ಗೆ ಹಲವು ಕುರುಹುಗಳಿವೆ
ಹಂಪೆ(ಆ.05) ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೂ ಬಳ್ಳಾರಿ ಜಿಲ್ಲೆಯ ಹಂಪಿಗೂ ಅವಿನಾಭಾವ ಸಂಬಂಧವಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಹಂಪಿಯಲ್ಲಿನ ಹಲವು ಸ್ಮಾರಕಗಳು ಇವೆ. ತ್ರೇತಾಯುಗದಲ್ಲಿ ಶ್ರೀರಾಮನು ಹಂಪಿಗೆ ಬಂದಿರೋ ಹಲವು ಕುರುಹುಗಳು ಇದೀಗ ಹಂಪಿಯಲ್ಲಿ ಲಭ್ಯವಿದೆ.
ಸೀತಾದೇವಿಯನ್ನು ಕಳೆದುಕೊಂಡ ರಾಮನು ದಕ್ಷಿಣದ ಕಡೆ ಮುಖ ಮಾಡಿದಾಗ ಹಂಪಿಯತ್ತ ಬರುತ್ತಾರೆ ಎನ್ನುವ ಪ್ರತೀತಿ ಇದೆ. ಆಗ ಇಲ್ಲಿ ವಾಲಿ ಸುಗ್ರೀವನ ಭೇಟಿಯಾಗುತ್ತಾರೆ. ಅಲ್ಲದೇ ಸೀತೆಯನ್ನು ರಾವಣ ಕರೆದುಕೊಂಡು ಹೋಗುವಾಗ ಸೀತಾ ಮಾತೆ ತನ್ನ ಆಭರಣಗಳನ್ನು ನೆಲಕ್ಕೆ ಹಾಕಿದ್ದರು ಎನ್ನುವದಕ್ಕೆ ಸೀತೆ ಸೆರೆಗು ಎನ್ನುವ ಸ್ಥಳ ಈಗಲೂ ಹಂಪಿ ಯಲ್ಲಿದೆ.
ಹನುಮನ ನಾಡಿನಲ್ಲಿ ನಿಂತು ಚಿಂತಕ ಸೂಲಿಬೆಲೆ ಮಾತು
ಇದರ ಜೊತೆ ವಾಲಿ ಸುಗ್ರೀವ ಯುದ್ಧ ಮಾಡಿದ ಗುಹೆಯು ಕೂಡ ಹಂಪಿ ಯಲ್ಲಿದೆ. ಹಂಪಿಯಲ್ಲಿನ ಹಜಾರರಾಮ ದೇವಸ್ಥಾನದಲ್ಲಿ ರಾಮಾಯಣದ ಹಲವು ಘಟನೆಗಳ ಚಿತ್ರಣಗಳು ಕೆತ್ತನೆ ಮಾಡಲಾಗಿದೆ.. ಇದರ ಜೊತೆ ರಘುನಾಥ ದೇವಸ್ಥಾನದಲ್ಲಿ ಶಸ್ತ್ರಾಸ್ತವಿಲ್ಲದೇ ಇರೋ ರಾಮನ ದೇವಾಲಯವಿದೆ. ಇಲ್ಲಿ ಶ್ರೀರಾಮನು ಚಾತುರ್ಮಾಸದ ನಾಲ್ಕು ತಿಂಗಳು ಕಳೆದ ಎನ್ನುವ ಕುರುಹು ಇದೆ. ಇದರ ಜೊತೆ ಯಂತ್ರೋದ್ಧಾರಕ ಆಂಜನೇಯ ಮತ್ತು ತುಂಗಾ ತೀರದಲ್ಲಿ ಶ್ರೀರಾಮ ಲಕ್ಷಣನ ದೊಡ್ಡ ದೊಡ್ಡ ವಿಗ್ರಹವಿರೋ ದೇವಸ್ಥಾನ ಇದೆಲ್ಲದಕ್ಕೂ ಸಾಕ್ಷಿ ಎನ್ನುವಂತೆ ಇಲ್ಲಿದೆ. ಇದೀಗ ಪಂಪಾ ನದಿಯ ಆ ಕಡೆ ದಡದಲ್ಲಿ ಅಂಜನಾದ್ರಿ ಬೆಟ್ಟದಿಂದ ಆಯೋಧ್ಯೆಗೆ ಶಿಲೆಯನ್ನು ತೆಗೆದುಕೊಂಡು ಹೋಗಲಾಗಿದೆ.