Asianet Suvarna News Asianet Suvarna News

ಕಗ್ಗತ್ತಲ ಕೂಪದಲ್ಲಿ ಕಲಬುರಗಿಯ ರಾವೂರ ಗ್ರಾಮ: Big 3 ವರದಿ ಬಳಿಕ ಎಚ್ಚೆತ್ತ ಅಧಿಕಾರಿಗಳು

ಕತ್ತಲಲ್ಲೇ ಓದು, ಕತ್ತಲಲ್ಲೇ ಊಟ, ಕತ್ತಲಲ್ಲೇ ನಿದ್ರೆ. ಇದು ಏಷ್ಯಾನೆಟ್ ಸುವರ್ಣ ನ್ಯುಸ್‌ನ ಬಿಗ್ 3 ಗಮನಕ್ಕೆ ಬಂದಿದ್ದು, ಈ ಬಗ್ಗೆ ಇಂದು(ಸೋಮವಾರ) ಬೆಳಗ್ಗೆ ಸುದ್ದಿ ಪ್ರಕಟಿಸಿದೆ. ಅಲ್ಲದೇ ಬಿಗ್ 3 ಬಿಟ್ಟ ಬಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ.,

First Published Aug 29, 2022, 8:17 PM IST | Last Updated Aug 29, 2022, 8:17 PM IST

ಕಲಬುರಗಿ, ಆಗಸ್ಟ್.29): ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾದ್ರೂ ಇಲ್ಲಿ ಮಾತ್ರ ವಿದ್ಯುತ್ ವ್ಯವಸ್ಥೆ ಇಲ್ಲ.  ಕಲಬುರಗಿಯ ರಾವೂರ ಗ್ರಾಮದಲ್ಲಿ ಜನರ ಭವಿಷ್ಯವೇ ಕತ್ತಲಲ್ಲಿದೆ. ಅಲ್ಲಿನ ಜನ ಕತ್ತಲಾದರೆ ಸಾಕು ಮೊಂಬತ್ತಿಯಲ್ಲಿ ಜೀವನ ಕಳೆಯುತ್ತಿದ್ದಾರೆ. ಮಕ್ಕಳು ಕ್ಯಾಂಡಲ್ ಬೆಳಕಿನಲ್ಲಿ ಓದು ಬರಹ ಮಾಡುತ್ತಿದ್ದಾರೆ. ಇಲ್ಲಿನ ಜನ ಕತ್ತಲಲ್ಲೇ ಓಡಾಟ ನಡೆಸಿ ನೀರು ತರುತ್ತಾರೆ ಎಂದರೆ ನಂಬಲೇ ಬೇಕು.  ಕತ್ತಲಲ್ಲೇ ಓದು, ಕತ್ತಲಲ್ಲೇ ಊಟ, ಕತ್ತಲಲ್ಲೇ ನಿದ್ರೆ. 

Big 3; ವಿದ್ಯುತ್‌ ಇಲ್ಲದೇ ಭವಿಷ್ಯವೇ ಕತ್ತಲು, ಕಗ್ಗತ್ತಲ ಕೂಪದಲ್ಲಿ ಕಲಬುರಗಿಯ ರಾವೂರ ಗ್ರಾಮ

ಇದು ಏಷ್ಯಾನೆಟ್ ಸುವರ್ಣ ನ್ಯುಸ್‌ನ ಬಿಗ್ 3 ಗಮನಕ್ಕೆ ಬಂದಿದ್ದು, ಈ ಬಗ್ಗೆ ಇಂದು(ಸೋಮವಾರ) ಬೆಳಗ್ಗೆ ಸುದ್ದಿ ಪ್ರಕಟಿಸಿದೆ. ಅಲ್ಲದೇ ಬಿಗ್ 3 ಬಿಟ್ಟ ಬಾಣಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ವಿದ್ಯುತ್ ಕಲ್ಪಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.