ಇದು ಆ '20' ವಿಡಿಯೋಗಳ ರಹಸ್ಯ: ಬಂಡೆಮಠದ ಶ್ರೀಗಳು ಬಲಿಯಾಗಿದ್ದು ಹೇಗೆ?
ರಾಮನಗರದ ಬಂಡೆಮಠದ ಬಸವಲಿಂಗ ಶ್ರೀಗಳ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಎಸ್ಪಿ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಸ್ವಾಮೀಜಿಗಳು ಬರೆದಿದ್ದು ಒಂದು ಡೆತ್ ನೋಟ್ ಅಲ್ಲ, ಅವರು ಮೂರು ಡೆತ್ ನೋಟ್ ಬರೆದಿದ್ದರು. ಹಾಗೂ ಸ್ವಾಮೀಜಿಗೆ ಬ್ಲಾಕ್ ಮೇಲ್ ಮಾಡಲಾಗಿದೆ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಇವತ್ತು ಮತ್ತೊಂದು ಸ್ಫೋಟಕ ಮಾಹಿತಿ ಬಂದಿದೆ. ಸ್ವಾಮೀಜಿಯನ್ನು ಟ್ರ್ಯಾಪ್ ಮಾಡಿದ್ದ ಗ್ಯಾಂಗ್ ಬಳಿ ಬರೋಬ್ಬರಿ 20 ವಿಡಿಯೋಗಳು ಇದ್ದವು ಎಂಬ ಮಾಹಿತಿ ಹೊರ ಬಿದ್ದಿದೆ. ಈ ರೀತಿ ಬಂಡೆಮಠ ಶ್ರೀಗಳ ಆತ್ಮಹತ್ಯೆ ಕೇಸ್'ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ.