Asianet Suvarna News Asianet Suvarna News

ರೇಷ್ಮೆ ಗೂಡು ರಸ್ತೆಗೆ ಚೆಲ್ಲಿ ರೈತರ ಪ್ರತಿಭಟನೆ..!

ರಾಮನಗರದ ರೇಷ್ಮೆ ಮಾರುಕಟ್ಟೆ ಮುಂದೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ರೈತರು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಹರೆ ನಡೆಸಿದ್ದಾರೆ.

First Published May 16, 2020, 6:16 PM IST | Last Updated May 16, 2020, 6:16 PM IST

ರಾಮನಗರ(ಮೇ.16): ರೇಷ್ಮೆ ಹರಾಜು ಮಾಡದಂತೆ ಡೀಲರ್ಸ್ ಬಹಿಷ್ಕಾರ ಹಾಕಿದ್ದಾರೆ. ಡೀಲರ್ಸ್ ಬಹಿಷ್ಕಾರದಿಂದ ರೇಷ್ಮೆ ಗೂಡು ಹರಾಜು ಸ್ಥಗಿತ. ರೊಚ್ಚಿಗೆದ್ದ ರೈತರು ರಸ್ತೆಗೆ ರೇಷ್ಮೆ ಗೂಡು ಚೆಲ್ಲಿ ಪ್ರತಿಭಟನೆ ನಡೆಸಿದ ಘಟನೆ ರಾಮನಗರದಲ್ಲಿ ನಡೆದಿದೆ.

ರಾಮನಗರದ ರೇಷ್ಮೆ ಮಾರುಕಟ್ಟೆ ಮುಂದೆ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಪಹರೆ ನಡೆಸಿದ್ದಾರೆ.

ಲಾಕ್‌ಡೌನ್ ಸಡಿಲಿಸಿದ್ರೂ ಸಿಲಿಕಾನ್ ಸಿಟಿ ಮಂದಿಗಿಲ್ಲ ರಿಲೀಫ್..!

ನಮಗೆ ನ್ಯಾಯ ಬೇಕು ಎಂದು ರೈತರು ಧರಣಿ ಕುಳಿತಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Video Top Stories