ಹೊಸ ಕಾಲೇಜು ಕಟ್ಟಡ ಉದ್ಘಾಟನೆಗೆ ಮೀನಾಮೇಷ: ಭೂತ ಬಂಗಲೆಯಲ್ಲಿ ಪಾಠ

ಬಳ್ಳಾರಿಯ ಕುರುಗೋಡು ತಾಲ್ಲೂಕು ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳು ಇಚ್ಛಾಶಕ್ತಿ ಕೊರತೆಯಿಂದ ಪೂರ್ಣ ಪ್ರಮಾಣದಲ್ಲಿ ಅಭಿವೃದ್ಧಿಯಾಗುತ್ತಿಲ್ಲ. ಇದಕ್ಕೆ ಸಾಕ್ಷಿ ಇಲ್ಲಿನ ಪಿಯುಸಿ ಕಾಲೇಜು ಕಾಲೇಜು ಕಟ್ಟಡ.

First Published Nov 3, 2022, 4:17 PM IST | Last Updated Nov 3, 2022, 4:17 PM IST

ಕುರುಗೋಡು ಪಟ್ಟಣದ ಬಳಿ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಪಿಯುಸಿ ಕಾಲೇಜಿನ ನೂತನ ಕಟ್ಟಡ ನಿರ್ಮಾಣ ಮಾಡಲಾಗಿದೆ. 2018-19ರಲ್ಲಿ ಕಟ್ಟಡ ಪೂರ್ಣಗೊಂಡಿದ್ದು, ಆರಂಭದಲ್ಲಿ ಕೊರೋನಾ ಹೆಸರಲ್ಲಿ ಉದ್ಘಾಟನೆಯಾಗಿಲ್ಲ. ಇದೀಗ ಹೊಸ ಕಾಲೇಜಿಗೆ ಹೋಗಲು ಸೂಕ್ತ ರಸ್ತೆಯಿಲ್ಲ. ಮತ್ತು ಕರೆಂಟ್, ಕುಡಿಯುವ ನೀರಿನ ವ್ಯವಸ್ಥೆಯಿಲ್ಲವೆಂದು ಹೊಸ ಕಾಲೇಜು ಉದ್ಘಾಟನೆಗೆ ಮೀನಾಮೇಷ ಎಣಿಸಲಾಗುತ್ತಿದೆ. ಹಾಗಾಗಿ ವಿದ್ಯಾರ್ಥಿಗಳಿಗೆ ಹಳೇ ಕಾಲೇಜು ಅನಿವಾರ್ಯವಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಹೊಸ ಕಟ್ಟಡವಿದ್ರೂ, ವಿದ್ಯಾರ್ಥಿಗಳು ಕನಿಷ್ಟ ಮೂಲಭೂತ ಸೌಕರ್ಯವಿಲ್ಲದ ಹಳೇ ಕಟ್ಟಡದಲ್ಲಿ ಪಾಠ ಕೇಳುತ್ತಿರೋದು ನಿಜಕ್ಕೂ ದುರಂತವಾಗಿದೆ.

ಶಿಕ್ಷಣಕ್ಕಾಗಿ ಜೀವ ಕೈಯಲ್ಲಿ ಹಿಡಿದು ನದಿ ದಾಟುವ ಮಕ್ಕಳು... ವಿಡಿಯೋ ವೈರಲ್

Video Top Stories