ಮಗನೋ? ಮೃಗನೋ? ಆಸ್ತಿ ವಿಚಾರಕ್ಕೆ ವೃದ್ಧ ತಾಯಿಯ ಜೊತೆ ಹೀಗಾ ವರ್ತಿಸೋದು?

Haveri News: ಆಸ್ತಿ ವಿಚಾರವಾಗಿ ಭಿನ್ನಾಭಿಪ್ರಾಯ ಹಿನ್ನೆಲೆ ವೃದ್ದೆಯನ್ನು ಅಮಾನುಷವಾಗಿ ಎಳೆದೊಯ್ದ ಘಟನೆ ಶಿಗ್ಗಾವಿ ತಾಲೂಕು ಮುಗಳಿಕಟ್ಟೆ ಗ್ರಾಮದಲ್ಲಿ ನಡೆದಿದೆ. 

First Published Oct 19, 2022, 6:45 PM IST | Last Updated Oct 19, 2022, 6:45 PM IST

ಹಾವೇರಿ (ಅ. 19): ಆಸ್ತಿ ವಿಚಾರವಾಗಿ ಭಿನ್ನಾಭಿಪ್ರಾಯ ಹಿನ್ನೆಲೆ ವೃದ್ದೆಯನ್ನು ಅಮಾನುಷವಾಗಿ ಎಳೆದೊಯ್ದ ಘಟನೆ ಶಿಗ್ಗಾವಿ ತಾಲೂಕು ಮುಗಳಿಕಟ್ಟೆ ಗ್ರಾಮದಲ್ಲಿ ನಡೆದಿದೆ.  ಗ್ರಾಮದ ವೃದ್ದೆ ಕರೆವ್ವಾ ಮಾದರ ಮಕ್ಕಳಿಲ್ಲದ ಕಾರಣ ಫಕ್ಕೀರಪ್ಪ ಎಂಬುವರನ್ನು ದತ್ತು ಪಡೆದಿದ್ದರು ಎನ್ನಲಾಗಿದೆ.  ಆದರೆ ದತ್ತು ಪುತ್ರ ಫಕ್ಕಿರಪ್ಪ ಸರಿಯಾಗಿ ಕಾಳಜಿ ವಹಿಸದ ಕಾರಣ ವೃದ್ದೆ ಕರೆವ್ವಾ ಮಾದರ ಖ್ವಾಜಾ ಮೈನುನುದ್ದೀನ್ ಎಂಬ ವ್ಯಕ್ತಿ ಆಶ್ರಯ ಪಡೆದಿದ್ದರು.  ಖ್ವಾಜಾ ಮೈನುದ್ದೀನ್‌ಗೆ ತಮ್ಮ ಹೆಸರಿಗಿರೋ ಜಮೀನು ಕರೆವ್ವಾ ಬಿಟ್ಟು ಕೊಟ್ಟಿದ್ದರು ಎನ್ನಲಾಗಿದೆ.  ಇದನ್ನು ಸಹಿಸದೇ ದತ್ತು ಪುತ್ರ ಫಕ್ಕೀರಪ್ಪ ಹಾಗೂ ಸಂಗಡಿಗರು ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಲಾಗಿದೆ. 

ಗಂಡನಿಂದಲೇ ಹೆಂಡತಿ ಮಗು ಕೊಲೆ: ದೇವಸ್ಥಾನದ ಹಣ ಕದ್ದಿದ್ದಕ್ಕೆ ಕುಟುಂಬಕ್ಕೆ ತಟ್ಟಿತ್ತೆ ಶಾಪ