ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆಯಿಲ್ಲ, ಬಾಣಂತಿಯರ ಪರದಾಟ ಅಷ್ಟಿಷ್ಟಲ್ಲ, ಅಧಿಕಾರಿಗಳು ಎಚ್ಚೆತ್ತಿಲ್ಲ!
ರಾಯಚೂರು ಜಿಲ್ಲೆ ಸಿರವಾರ ತಾ. ಕಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಣಂತಿಯರು ಬೆಡ್‌ಗಳಿಲ್ಲದೇ ಪರದಾಡುತ್ತಿದ್ದಾರೆ. ಒಂದೇ ದಿನ ನಾಲ್ಕು ಹೆರಿಗೆಯಾಗಿದೆ. ಸೂಕ್ತ ವ್ಯವಸ್ಥೆ ಸಿಗದೇ ತಾಯಿ ಮತ್ತು ಮಗು ಪರದಾಡುವಂತಾಗಿದೆ.
ರಾಯಚೂರು (ಡಿ. 30): ಇಲ್ಲಿನ ಸಿರವಾರ ತಾ. ಕಲ್ಲೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಾಣಂತಿಯರು ಬೆಡ್‌ಗಳಿಲ್ಲದೇ ಪರದಾಡುತ್ತಿದ್ದಾರೆ. ಒಂದೇ ದಿನ ನಾಲ್ಕು ಹೆರಿಗೆಯಾಗಿದೆ. ಸೂಕ್ತ ವ್ಯವಸ್ಥೆ ಸಿಗದೇ ತಾಯಿ ಮತ್ತು ಮಗು ಪರದಾಡುವಂತಾಗಿದೆ. ಬೆಡ್ ಇಲ್ಲದೇ ನೆಲದಲ್ಲೇ ಮಲಗಿದ್ದಾರೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಗೊತ್ತಿದ್ದರೂ ಅಧಿಕಾರಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ವಹಿಸಿದ್ದಾರೆ. ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಸಹಕರಿಸಿ: ಸಿಎಂ ಮನವಿ