ಮಾಜಿ ಡಿಸಿಎಂ ಕ್ಷೇತ್ರದ ಆಸ್ಪತ್ರೆಯಲ್ಲಿ ಮೊಂಬತ್ತಿ ಬೆಳಕಿನಲ್ಲಿ ಹೆರಿಗೆ ಮಾಡಿಸೋ ಪರಿಸ್ಥಿತಿ.!
ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಕನಿಷ್ಠ ವಿದ್ಯತ್ ಸಂಪರ್ಕ ಇಲ್ಲದೇ ಮೊಂಬತ್ತಿ ಬೆಳಕಿನಲ್ಲಿ ಹೆರಿಗೆ ಮಾಡಿಸುತ್ತಾರೆ ಅಂದರೆ ಎಂಥಹ ದುಃಸ್ಥಿತಿ ಇದೆ ನೋಡಿ.
ತುಮಕೂರು (ಅ. 26): ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಇದಕ್ಕಿಂತ ನಾಚಿಕೆಗೇಡಿನ ಸಂಗತಿ ಮತ್ತೊಂದಿಲ್ಲ. ಕನಿಷ್ಠ ವಿದ್ಯತ್ (Power) ಸಂಪರ್ಕ ಇಲ್ಲದೇ ಮೊಂಬತ್ತಿ (Candle Light) ಬೆಳಕಿನಲ್ಲಿ ಹೆರಿಗೆ ಮಾಡಿಸುತ್ತಾರೆ ಅಂದರೆ ಎಂಥಹ ದುಃಸ್ಥಿತಿ ಇದೆ ನೋಡಿ. ಮಾಜಿ ಡಿಸಿಎಂ ಜಿ.ಪರಮೇಶ್ವರ್ (Dr G Parameshwar) ಅವರ ಕ್ಷೇತ್ರ ಕೊರಟಗೆಯ ತೋವಿನಕೆರೆ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಇಲ್ಲದ ಪರಿಣಾಮ ಮೊಂಬತ್ತಿ ಬೆಳಕಿನಲ್ಲಿ ಹೆರಿಗೆ ಮಾಡಿಸಲಾಗಿದೆ.
ವಿದ್ಯಾರ್ಥಿನಿಗೆ ಸೀಟು ಕೊಡಿಸುವಲ್ಲಿ ನೆರವಾದ 'ಹಲೋ ಮಿನಿಸ್ಟರ್'
ಕೆಲವು ವರ್ಷದಿಂದ ಹೆರಿಗೆ ವಾರ್ಡ್ ಮಳೆ ನೀರಿನಿಂದ ಸೋರುತ್ತಿದ್ದರೂ ದುರಸ್ತಿಯಾಗಿಲ್ಲ. ನೀರು ಸೋರುವುದರಿಂದ ವಿದ್ಯುತ್ ಸ್ವಿಚ್ ಹಾಕಿದರೆ ಶಾಕ್ ಹೊಡೆಯಬಹುದು ಎನ್ನುವ ಕಾರಣದಿಂದ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ತೋವಿನಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರ ಸರ್ಕಾರ ನಿಗದಿ ಪಡಿಸಿರುವುದಕ್ಕಿಂತಲೂ ಹೆಚ್ಚು ಹೆರಿಗೆಗಳನ್ನು ಮಾಡಿಸಿ ರಾಜ್ಯದಲ್ಲಿ ಹೊಸ ಇತಿಹಾಸ ಸೃಷ್ಟಿಸಿತ್ತು. ತೋವಿನಕೆರೆ ಸುತ್ತಮುತ್ತಲಿನ 40 ಹಳ್ಳಿಗಳ ಜನರು ಈ ಆಸ್ಪತ್ರೆಯನ್ನು ನಂಬಿಕೊಂಡಿದ್ದಾರೆ. ಹೆರಿಗೆ ತುರ್ತು ಸಂದರ್ಭದಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ಮಹಿಳೆಯರು ಸಂಕಟ ಅನುಭವಿಸುತ್ತಿದ್ದಾರೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕಾಗಿದೆ.