Asianet Suvarna News Asianet Suvarna News

ವಿದ್ಯಾರ್ಥಿನಿಗೆ ಸೀಟು ಕೊಡಿಸುವಲ್ಲಿ ನೆರವಾದ 'ಹಲೋ ಮಿನಿಸ್ಟರ್'

ಏಷ್ಯಾನೆಟ್ ಸುವರ್ಣ ನ್ಯೂಸ್‌ನ 'ಹಲೋ ಮಿನಿಸ್ಟರ್' ಕಾರ್ಯಕ್ರಮದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ ಕೊಟ್ಟ ಆಶ್ವಾಸನೆ ಈಡೇರಿದೆ. ಅಂದು ಬಡತನದ ಕಾರಣದಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದ ಕೀರ್ತಿ ಎಂಬುವವರ ಸುದ್ದಿಯನ್ನು ಸಚಿವರ ಗಮನಕ್ಕೆ ತರಲಾಗಿತ್ತು. 

First Published Oct 26, 2021, 10:26 AM IST | Last Updated Oct 26, 2021, 12:28 PM IST

ಬೆಂಗಳೂರು (ಅ. 26): ಏಷ್ಯಾನೆಟ್ ಸುವರ್ಣ ನ್ಯೂಸ್‌ನ 'ಹಲೋ ಮಿನಿಸ್ಟರ್' (Hello Minister) ಕಾರ್ಯಕ್ರಮದಲ್ಲಿ ಕೋಟಾ ಶ್ರೀನಿವಾಸ ಪೂಜಾರಿ (Kota Srinivasa Poojary) ಕೊಟ್ಟ ಆಶ್ವಾಸನೆ ಈಡೇರಿದೆ.

ಇಂದಿನ 'ಹಲೋ ಮಿನಿಸ್ಟರ್'ನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ

ಅಂದು ಬಡತನದ ಕಾರಣದಿಂದ ಓದನ್ನು ಅರ್ಧಕ್ಕೆ ನಿಲ್ಲಿಸಿದ್ದ ಕೀರ್ತಿ ಎಂಬುವವರ ಸುದ್ದಿಯನ್ನು ಸಚಿವರ ಗಮನಕ್ಕೆ ತರಲಾಗಿತ್ತು. 24 ಗಂಟೆಯೊಳಗೆ ಕೀರ್ತಿಗೆ ಸೀಟು ಕೊಡಿಸುವುದಾಗಿ ಶ್ರೀನಿವಾಸ ಪೂಜಾರಿ ಅವರು ಭರವಸೆ ನೀಡಿದ್ದರು. ಮಾತು ಕೊಟ್ಟಂತೆ ಮೊರಾರ್ಜಿ ಶಾಲೆಯಲ್ಲಿ ಸೀಟು ಸಿಕ್ಕಿದೆ. ಕೀರ್ತಿ ಕುಟುಂಬ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. 

Video Top Stories