ಕಲಬುರಗಿ: ಕಳ್ಳದಾರಿಯಲ್ಲೇ ರಾಜ್ಯ ಪ್ರವೇಶ, ಡಿಸಿ ಆದೇಶಕ್ಕಿಲ್ಲ ಕವಡೆ ಕಾಸಿನ ಕಿಮ್ಮತ್ತು..!

* ಕಿರಿದಾದ ದಾರಿ, ಮುಳ್ಳುಕಂಟಿ, ತಗ್ಗು ದಿಣ್ಣೆ ದಾಟಿ ಬರ್ತಾರೆ ಜನರು
* ಕಳ್ಳದಾರಿ ಮೂಲಕ ಕಾಲ್ನಡಿಗೆಯಲ್ಲಿ ಕಲಬುರಗಿ ಗಡಿ ಪ್ರವೇಶ
* ಇಲ್ಲಿ ನೆಗೆಟಿವ್ ರಿಪೋರ್ಟ್ ಕೇಳೋರಿಲ್ಲ, ವ್ಯಾಕ್ಸಿನೇಷನ್ ರಿಪೋರ್ಟ್ ನೋಡೋರಿಲ್ಲ
 

First Published Aug 1, 2021, 3:39 PM IST | Last Updated Aug 1, 2021, 3:39 PM IST

ಕಲಬುರಗಿ(ಆ.01): ಮಹಾರಾಷ್ಟ್ರದಿಂದ ಜಿಲ್ಲೆಗೆ ಬರುವವರಿಗೆ ಕೋವಿಡ್‌ ನೆಗೆಟಿವ್ ರಿಪೋರ್ಟ್‌ ಕಡ್ಡಾಯ ಮಾಡಲಾಗಿದೆ. ಇಲ್ಲದಿದ್ರೆ ಮಹಾರಾಷ್ಟ್ರದಿಂದ ಬರುವವರನ್ನ ಜಿಲ್ಲೆಯ ಒಳಗಡೆ ಸೇರಿಸೋದಿಲ್ಲ. ಆದ್ರೆ ಕಳ್ಳ ಮಾರ್ಗದ ಮೂಲಕ ಸಾವಿರಾರು ಜನ ನಿತ್ಯವೂ ಜಿಲ್ಲೆಗೆ ಪ್ರವೇಶಿಸುತ್ತಿದ್ದಾರೆ. ಜಿಲ್ಲೆಯ ಹಿರೊಳ್ಳಿ ಚೆಕ್ ಪೋಸ್ಟ್ ಹಿಂಬದಿಯಲ್ಲಿರುವ ಕಳ್ಳಮಾರ್ಗದ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಜನರು ಜಿಲ್ಲೆಗೆ ಆಗಮಿಸುತ್ತಿದ್ದಾರೆ. ಇಲ್ಲಿ ನೆಗೆಟಿವ್ ರಿಪೋರ್ಟ್ ಕೇಳೋರಿಲ್ಲ, ವ್ಯಾಕ್ಸಿನೇಷನ್ ರಿಪೋರ್ಟ್ ನೋಡೋರಿಲ್ಲ. ಮಹಾರಾಷ್ಟ್ರದ ಜನ ಕಲಬುರಗಿ ಗಡಿ ನುಸುಳುವ ಕಳ್ಳಮಾರ್ಗವನ್ನ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಪತ್ತೆ ಹಚ್ಚಿದೆ. ಈ ಕುರಿತು ವಿವರವಾದ ಮಾಹಿತಿ ಈ ವಿಡಿಯೋದಲ್ಲಿದೆ. 

ಬಾಗಲಕೋಟೆ: ತೆರೆಬಂಡಿ ಸ್ಪರ್ಧೆ ವೇಳೆ ಎಗರಿದ ಎತ್ತುಗಳು, ದಿಕ್ಕಾಪಾಲಾದ ಜನ..!