Asianet Suvarna News Asianet Suvarna News

ಬಾಗಲಕೋಟೆ: ತೆರೆಬಂಡಿ ಸ್ಪರ್ಧೆ ವೇಳೆ ಎಗರಿದ ಎತ್ತುಗಳು, ದಿಕ್ಕಾಪಾಲಾದ ಜನ..!

Aug 1, 2021, 3:24 PM IST

ಬಾಗಲಕೋಟೆ(ಆ.01): ತೆರೆಬಂಡಿ ಸ್ಪರ್ಧೆ ನಡೆದ ವೇಳೆ ಎತ್ತುಗಳು ಏಕಾಏಕಿ ಜನರಿದ್ದ ಕಡೆಗೆ ಎಗರಿ ಹೋದ ಘಟನೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಚಿಮ್ಮಡ ಗ್ರಾಮದಲ್ಲಿ ಇಂದು(ಭಾನುವಾರ) ನಡೆದಿದೆ. ಎತ್ತುಗಳು ಏಕಾಏಕಿ ಹಾರಿ ಬಂದಿದ್ದರಿಂದ ಜನರು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಬಳಿಕ ಸುಧಾರಿಸಿಕೊಂಡ ಗ್ರಾಮಸ್ಥರು ಸ್ಪರ್ಧೆಯನ್ನ  ಸರಾಗವಾಗಿ ನಡೆಸಿದ್ದಾರೆ. ದುರ್ಗಾದೇವಿ ಜಾತ್ರೆ ನಿಮಿತ್ತ ಚಿಮ್ಮಡ ಗ್ರಾಮದಲ್ಲಿ ರಾಜ್ಯ ಮಟ್ಟದ ತೆರೆಬಂಡಿ ಆಯೋಜಿಸಲಾಗಿತ್ತು.

ನಡುಗುತ್ತಿದೆ ಭೂಮಿ, ಕುಸಿಯುತ್ತಿದೆ ಬೆಟ್ಟ, ಮಾಯವಾಯ್ತು 100 ಮೀಟರ್ ರಸ್ತೆ!