Asianet Suvarna News Asianet Suvarna News

ರೇಣುಕಾಸ್ವಾಮಿ ಹತ್ಯೆ ಹಿಂದಿದೆಯಾ ಆ ಒಂದು ಕಾರಣ ? ಪವಿತ್ರಾ ಸಮಾಧಾನ ಮಾಡಲು ದರ್ಶನ್‌ಗೆ ಸಿಕ್ಕ ಅಸ್ತ್ರ ರೇಣುಕಾಸ್ವಾಮಿನಾ ?

ಕಿಡ್ನಾಪ್ ನೆಪದಲ್ಲಿ ಮತ್ತೆ ಪವಿತ್ರಾ ಗೌಡಗೆ ಹತ್ತಿರವಾಗೋದು ದರ್ಶನ್ ಪ್ಲಾನ್..?
ಪವಿತ್ರಾಗೌಡಗೆ ಕರೆ ಮಾಡಿ ನಿನಗೊಂದು ಸರ್ಪ್ರೈಸ್ ಇದೆ ಬಾ ಎಂದಿದ್ದ ದರ್ಶನ್
ಶೆಡ್‌ಗೆ ಪವಿತ್ರಾ ಕರೆಸಿ ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಹೊಡೆಸಿದ್ದ ನಟ ದರ್ಶನ್

ದರ್ಶನ್ ಗ್ಯಾಂಗ್‌ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ (Renukaswamy murder case) ಸಂಬಂಧಿಸಿದಂತೆ ಮತ್ತೊಂದು ಸ್ಫೋಟಕ ರಹಸ್ಯ ಬಯಲಾಗಿದೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ಪವಿತ್ರಾ ಗೌಡಗೆ(Pavitra Gowda) ದರ್ಶನ್ ಮೇಲೆ ಮುನಿಸಿತ್ತು ಎನ್ನಲಾಗ್ತಿದೆ. ದರ್ಶನ್-ಪವಿತ್ರಾ ನಡುವೆ ದೊಡ್ಡ ಗಲಾಟೆಯೇ ನಡೆದಿತ್ತಂತೆ. ಇವರಿಬ್ಬರ ನಡುವಿನ ಗಲಾಟೆಯೇ ರೇಣುಕಾಸ್ವಾಮಿ ಹತ್ಯೆಗೆ ಕಾರಣವಾಗಿದೆ ಎನ್ನಲಾಗ್ತಿದೆ. ಮೇ 19ರಂದು ದರ್ಶನ್ (Darshan) ವಿಜಯಲಕ್ಷ್ಮಿ ವೆಡ್ಡಿಂಗ್ ಆ್ಯನಿವರ್ಸರಿ ಇದ್ದು, ಪತ್ನಿ ವಿಜಯಲಕ್ಷ್ಮಿ ಜೊತೆ ವೆಡ್ಡಿಂಗ್ ಆನಿವರ್ಸರಿ ದರ್ಶನ್ ಮಾಡಿಕೊಂಡಿದ್ದರು. ದುಬೈನಲ್ಲಿ ದರ್ಶನ್-ವಿಜಯಲಕ್ಷ್ಮಿ ಮದುವೆ ವಾರ್ಷಿಕೋತ್ಸವ (wedding anniversary) ಆಚರಿಸಿಕೊಂಡಿದ್ದರು. ವಾರ್ಷಿಕೋತ್ಸವದ ಫೋಟೋ, ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಮೇ 20ರಂದು ತನ್ನ ಸೋಷಿಯಲ್ ಮೀಡಿಯಾದಲ್ಲಿ ಇದನ್ನು  ವಿಜಯಲಕ್ಷ್ಮಿ ಶೇರ್ ಮಾಡಿದ್ದರು. ವಿಜಯಲಕ್ಷ್ಮೀ ಪೋಸ್ಟ್ ನೋಡಿ  ಪವಿತ್ರಾ ಗೌಡ ಸಿಟ್ಟಾಗಿದ್ದರು. ಒಂದು ದಿನದ ಬಳಿಕ ಸೋಷಿಯಲ್ ಮೀಡಿಯಾದಲ್ಲಿ ಪವಿತ್ರಾ ಗೌಡ  ಟ್ವೀಟ್ ಮಾಡಿ, ದರ್ಶನ್ ಹೇಳಿದ್ದ ಕರ್ಮ ರಿಟರ್ನ್ಸ್ ಹೇಳಿಕೆಯನ್ನು ಪೋಸ್ಟ್ ಮಾಡಿದ್ದರು. ಮೇ21 ರಂದು ಕರ್ಮ ರಿಟರ್ನ್ ಬರಹ ಪೋಸ್ಟ್‌ನನ್ನು ಪವಿತ್ರಾ ಗೌಡ ಪೋಸ್ಟ್‌ ಮಾಡಿದ್ದರು. ದರ್ಶನ್ ಜೊತೆ ಒಂದು ವಾರ ಮಾತು ಬಿಟ್ಟಿದ್ರಂತೆ ಪವಿತ್ರಾ ಗೌಡ, ಈ ಒಂದು ವಾರದ ಮಧ್ಯದಲ್ಲೇ ಪವಿತ್ರಾ ಗೌಡಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದಾನೆ. ಮಾತು ಬಿಟ್ಟಿದ್ದರಿಂದ ದರ್ಶನ್ಗೆ ರೇಣುಕಾಸ್ವಾಮಿ ವಿಚಾರ ತಿಳಿಸಿರಲಿಲ್ಲ. ತನ್ನ ಮನೆಯ ಕೆಲಸದ ಪವನ್‌ಗೆ ವಿಚಾರವನ್ನು ಪವಿತ್ರಾ ಗೌಡ ತಿಳಿಸಿದ್ದರು. ಪವನ್ ಮೂಲಕ ರೇಣುಕಾಸ್ವಾಮಿ ವಿಚಾರ ದರ್ಶನ್ ಗಮನಕ್ಕೆ ಬಂದಿದೆ.

ಇದನ್ನೂ ವೀಕ್ಷಿಸಿ:  ಹೇಗಿತ್ತು ಗೊತ್ತಾ 'ಮೇಷ್ಟ್ರು'ರಾಮಯ್ಯನ ಪಾಠಶಾಲೆ..? ಕನ್ನಡ ವ್ಯಾಕರಣದ ಪಾಠ ಮಾಡಿದ 'ಕನ್ನಡ'ರಾಮಯ್ಯ..!

Video Top Stories