Asianet Suvarna News Asianet Suvarna News

ಹೇಗಿತ್ತು ಗೊತ್ತಾ 'ಮೇಷ್ಟ್ರು'ರಾಮಯ್ಯನ ಪಾಠಶಾಲೆ..? ಕನ್ನಡ ವ್ಯಾಕರಣದ ಪಾಠ ಮಾಡಿದ 'ಕನ್ನಡ'ರಾಮಯ್ಯ..!

ಸಿದ್ದು ಮೇಷ್ಟ್ರ ಪಾಠಶಾಲೆಯಲ್ಲಿ ಮಾರ್ಧನಿಸಿತು ಕನ್ನಡ ಡಿಂಡಿಮ..!
ಪಾಠಶಾಲೆ ಮುಗಿಸಿ ಮಕ್ಕಳೊಂದಿಗೆ ಮುದ್ದೆ ಮುರಿದ ಮುಖ್ಯಮಂತ್ರಿ..!
ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕನ್ನಡ ಮೇಷ್ಟ್ರಾದ ಸಿಎಂ..!

ಮುಖ್ಯಮಂತ್ರಿ ಸಿದ್ದರಾಮಯ್ಯನವರ (Siddaramaiah) ಕನ್ನಡ ಪ್ರೀತಿ, ಕನ್ನಡ ಭಾಷೆಯ ಮೇಲಿನ ಅಭಿಮಾನ ಪ್ರಶ್ನಾತೀತ. ಅವರೊಂದು ರೀತಿಯಲ್ಲಿ ಕನ್ನಡದ ಬ್ರ್ಯಾಂಡ್ ಅಂಬಾಸಿಡರ್. ಕನ್ನಡತನವನ್ನು ಎತ್ತಿ ಹಿಡಿಯೋದ್ರಲ್ಲಿ ಸಿದ್ದರಾಮಯ್ಯನವರನ್ನು ಮೀರಿಸಿದ ಮತ್ತೊಬ್ಬ ರಾಜಕಾರಣಿಯಿಲ್ಲ. ಅದಕ್ಕೇ ಅವರನ್ನು ಕನ್ನಡರಾಮಯ್ಯ ಅಂತ ಕರೆಯೋದು. ಇಂಥಾ ಕನ್ನಡರಾಮಯ್ಯ ಆಗಾಗ ಕನ್ನಡ ವ್ಯಾಕರಣದ(Kannada Vyakarana) ಪಾಠಗಳನ್ನು ಮಾಡ್ತಾರೆ, ವಿಧಾನಸಭೆಯನ್ನೇ ಕನ್ನಡ ಪಾಠಶಾಲೆಯನ್ನಾಗಿ ಮಾಡಿ, ಶಾಸಕರಿಗೆ ವ್ಯಾಕರಣ ಪಾಠ ಮಾಡಿ ಬಿಡ್ತಾರೆ ಸಿದ್ದು ಮೇಷ್ಟ್ರು. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶುಕ್ರವಾರ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಗೆ (Morarji Desai Residential School) ಭೇಟಿ ಕೊಟ್ಟಿದ್ರು. ಬಂದದ್ದು ಶಾಲೆಯ ವಸ್ತುಸ್ಥಿತಿ ತಿಳಿಯೋದಕ್ಕೆ. ಪರಿಶೀಲನೆಗೆ ಅಂತಾ ಬಂದ  ಮುಖ್ಯಮಂತ್ರಿಗಳು ಕನ್ನಡ ಮೇಷ್ಟ್ರಾಗಿಬಿಟ್ರು. ನೇರವಾಗಿ ಶಾಲಾ ಕೊಠಡಿಯೊಂದಕ್ಕೆ ಎಂಟ್ರಿ ಕೊಟ್ಟವರೇ, ಮಕ್ಕಳಿಗೆ ಕನ್ನಡ ವ್ಯಾಕರಣ, ವ್ಯಂಜನ, ಸಂಧಿ, ಸಮಾಸದ ಪಾಠ ಮಾಡಿದ್ರು. 10ನೇ ತರಗತಿಯ ಮಕ್ಕಳ ಕೊಠಡಿಗೆ ಎಂಟ್ರಿ ಕೊಟ್ಟ ಸಿದ್ದು ಮೇಷ್ಟು, ನೇರವಾಗಿ ವಿದ್ಯಾರ್ಥಿಗಳ ಮುಂದೆ ಬಂದು ಕೂತು ಬಿಟ್ರು. ಪಕ್ಕದಲ್ಲೇ ಇದ್ದ ವಿದ್ಯಾರ್ಥಿಯೊಬ್ಬನ ನೋಟ್ಸನ್ನು ತದೇಕಚಿತ್ತದಿಂದ ವೀಕ್ಷಿಸಿದ್ರು.ನಅಲ್ಲಿಂದ ಶುರುವಾಯ್ತು ನೋಡಿ ಶಾಲಾ ಮಕ್ಕಳಿಗೆ ಸಿದ್ದು ಮೇಷ್ಟ್ರ ಕನ್ನಡ ಪಾಠ. ನಿಂಗೆ ವ್ಯಾಕರಣ ಹೇಳಿ ಕೊಟ್ಟಿದ್ದಾರೆನಯ್ಯಾ ಅಂತ ವಿದ್ಯಾರ್ಥಿಯೊಬ್ಬನನ್ನು ಪ್ರಶ್ನಿಸುವ ಮೂಲಕ, ಆರಂಭವಾಯ್ತು ಕನ್ನಡರಾಮಯ್ಯನ ಪಾಠ ಶಾಲೆ.

ಇದನ್ನೂ ವೀಕ್ಷಿಸಿ:  Divya Vasanth absconds: ರೋಲ್‌ಕಾಲ್ ಪತ್ರಕರ್ತರ ಡೀಲ್ ಕಹಾನಿ..! ರಾಜ್ಯವೇ ಖುಷಿ ಪಡೋ ಸುದ್ದಿ ಕೊಟ್ಟವಳು ನಾಪತ್ತೆ..!