ಯಾದಗಿರಿ: ಆರೋಗ್ಯ ಸಚಿವರೇ ಇಲ್ನೋಡಿ, ಇದು ಮನುಷ್ಯರು ತಿನ್ನೋ ಊಟಾನಾ..?
ಬೆಳಿಗ್ಗೆ 10 ಗಂಟೆಗೆ ತಿಂಡಿ, ಮಧ್ಯಾಹ್ನ 3 ಗಂಟೆಗೆ ಊಟ| ಅವ್ಯಸ್ಥೆಯ ಆಗರವಾದ ಯಾದಗಿರಿ ಜಿಲ್ಲಾಸ್ಪತ್ರೆ| ಸರಿಯಾದ ಸಮಯಕ್ಕೆ ಅಹಾರ ಸಿಗದೆ ಮಕ್ಕಳು, ವೃದ್ಧರು, ಮಹಿಳೆಯರು ಪರದಾಟ|
ಯಾದಗಿರಿ(ಜೂ.10): ನಗರದ ಜಿಲ್ಲಾಸ್ಪತ್ರೆ ಅವ್ಯವಸ್ಥೆಯ ಅಗರವಾಗಿದೆ. ಹೌದು, ಆಸ್ಪತ್ರೆಯಲ್ಲಿ ಯಾವುದೇ ಮೂಲಸೌಕರ್ಯಗಳಿಲ್ಲ. ಬೆಳಿಗ್ಗೆ 10 ಗಂಟೆಗೆ ತಿಂಡಿ ನೀಡಲಾಗುತ್ತದೆ. ಮಧ್ಯಾಹ್ನ 3 ಗಂಟೆಗೆ ಊಟ ಕೊಡಲಾಗುತ್ತದೆ. ಆದರೆ, ಸರಿಯಾದ ಸಮಯಲ್ಲಿ ಆಹಾರ ನೀಡದಿದ್ದರಿಂದ ಮಕ್ಕಳು, ವೃದ್ಧರು, ಮಹಿಳೆಯರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
'ಯುವ ಸಮುದಾಯಕ್ಕೆ ಕೊರೋನಾ ಬಂದ್ರೆ, ಸೋಂಕು ಕಂಟ್ರೋಲ್ ಆಗುತ್ತೆ'
ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸಲು ರಾಜ್ಯ ಸರ್ಕಾರ ಸಾಕಷ್ಟು ಹಣ ಖರ್ಚು ಮಾಡುತ್ತಿದೆ.ಆದರೆ ಇಲ್ಲಿ ಮಾತ್ರ ಹಸಿವಿನ ಯಾತನೆ ಇದೆ. ಸರ್ಕಾರ ಹಣ ನೀಡುತ್ತಿದ್ದರೂ ಕೂಡ ಇಲ್ಲಿನ ಅಧಿಕಾರಿಗಳ ಬೇಜವ್ದಾರಿಯಿಂದ ಸರಿಯಾದ ಸಮಯಕ್ಕೆ ಊಟ ಪೂರೈಕೆಯಾಗುತ್ತಿಲ್ಲ. ಕಳಪೆ ಗುಣಮಟ್ಟದ ಆಹಾರ ನೀಡುತ್ತಿದ್ದಾರೆ ಎಂದು ರೋಗಿಗಳು ಅರೋಪಿಸಿದ್ದಾರೆ.,