ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಉದ್ಧಟತನ: ರಾತ್ರಿಯಿಡಿ ಹೊಟ್ಟೆ ನೋವಿನಿಂದ ನರಳಾಡಿದ್ರೂ ಚಿಕಿತ್ಸೆಗೆ ಹಿಂದೇಟು
ಮಾನವೀಯತೆಯನ್ನೇ ಮರೆತ ಸರ್ಕಾರಿ ಆಸ್ಪತ್ರೆಯ ವೈದ್ಯರು| ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಅಂತ ಸಿಬ್ಬಂದಿ ರೋಗಿಯನ್ನ ಒಳಗಡೆ ಬಿಡದ ಸಿಬ್ಬಂದಿ|ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ ಸಿಬ್ಬಂದಿ|
ದೊಡ್ಡಬಳ್ಳಾಪುರ(ಜೂ.06): ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ ರೋಗಿಗೆ ವೈದ್ಯರು ಚಿಕಿತ್ಸೆ ನೀಡದ ಘಟನೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ. ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಅಂತ ಸಿಬ್ಬಂದಿ ರೋಗಿಯನ್ನ ಒಳಗಡೆ ಬಿಟ್ಟಿಲ್ಲ, ಹೀಗಾಗಿ ಮಧ್ಯರಾತ್ರಿ ಬೀದಿಯಲ್ಲಿ ರೋಗಿ ಬಿದ್ದು ಹೊಟ್ಟೆನೋವಿನಿಂದ ನರಳಾಡಿದ್ದಾರೆ.
ಕೊರೋನಾ ಲಕ್ಷಣ ಇಲ್ಲದವರ ಪರೀಕ್ಷೆ ನಡೆಸದಿರಲು ಸರ್ಕಾರ ನಿರ್ಧಾರ..!
ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲ ಹೀಗಾಗಿ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆ ಪಡೆದುಕೊಳ್ಳಿ ಎಂದು ಅಲ್ಲಿನ ಸಿಬ್ಬಂದಿ ಉದ್ಧಟತನದ ಹೇಳಿಕೆಯನ್ನ ನೀಡುವ ಮೂಲಕ ಅಮಾನವೀಯವಾಗಿ ವರ್ತಿಸಿದ್ದಾರೆ. ಆದರೆ, ಕೈಲ್ಲಿ ದುಡ್ಡಿಲ್ಲದೆ ಖಾಸಗಿ ಆಸ್ಪತ್ರೆಗೆ ಹೋಗಲಾಗದೆ ರಸ್ತೆಯಲ್ಲೇ ರೋಗಿ ನರಳಾಡಿದ್ದಾರೆ.