ನೋ ವ್ಯಾಕ್ಸಿನೇಷನ್...ನೋ ರೇಷನ್: ಆಯ್ಕೆ ನಿಮ್ಮ ಮುಂದೆ..!
ನೋ ವ್ಯಾಕ್ಸಿನೇಷನ್ ನೋ ಪೆನ್ಷನ್, ನೋ ವ್ಯಾಕ್ಸಿನೇಷನ್ ನೋ ರೇಷನ್. ಲಸಿಕಾಕರಣಕ್ಕೆ ವೇಗ ನೀಡಲು ಚಾಮರಾಜನಗರ ಜಿಲ್ಲಾಡಳಿತದ ವಿಭಿನ್ನ ಅಭಿಯಾನ ಶುರು ಮಾಡಿದೆ.
ಚಾಮರಾಜನಗರ, (ಆ.31): ನೋ ವ್ಯಾಕ್ಸಿನೇಷನ್ ನೋ ಪೆನ್ಷನ್, ನೋ ವ್ಯಾಕ್ಸಿನೇಷನ್ ನೋ ರೇಷನ್. ಲಸಿಕಾಕರಣಕ್ಕೆ ವೇಗ ನೀಡಲು ಚಾಮರಾಜನಗರ ಜಿಲ್ಲಾಡಳಿತದ ವಿಭಿನ್ನ ಅಭಿಯಾನ ಶುರು ಮಾಡಿದೆ.
ಬೊಮ್ಮಾಯಿ ಸಿಎಂ ಆದ ಬಳಿಕ ಲಸಿಕಾ ಅಭಿಯಾನ ಚುರುಕು
ಕೋವಿಡ್ ವ್ಯಾಕ್ಸಿನೇಷನ್ ಪ್ರಮಾಣ ಪತ್ರ ತಂದರೆ ಮಾತ್ರ ಪಡಿತರ ವಿತರಣೆ ಮಾಡಲು ನ್ಯಾಯಬೆಲೆ ಅಂಗಡಿಗಳಿಗೆ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಸೂಚನೆ ಕೊಟ್ಟಿದ್ದಾರೆ.
ಸಂಧ್ಯಾ ಸುರಕ್ಷಾ, ವಿಧವಾ ವೇತನ, ಅಂಗವಿಕಲ ವೇತನ ಸೇರಿದಂತೆ 2ಲಕ್ಷ 20 ಸಾವಿರ ಮಂದಿ ಮಾಸಾಶನ ಫಲಾನುಭವಿಗಳ ಬಳಿ ವ್ಯಾಕ್ಸಿನೇಷನ್ ಪ್ರಮಾಣಪತ್ರ ಇದ್ದರೆ ಮಾತ್ರ ಮಾಸಾಶನ ಪಾವತಿ ಮಾಡುವಂತೆಯೂ ಸಹ ಬ್ಯಾಂಕ್‌ಗಳಿಗೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.