Dharwad: ಕೋವಿಡ್ ಡ್ಯೂಟಿ ಮಾಡಿದ ಸಿಬ್ಬಂದಿಗಳಿಗೆ ರಿಸ್ಕ್ ಅಲೋಯನ್ಸ್ ಇಲ್ಲ, 2 ತಿಂಗಳ ವೇತನವೂ ಇಲ್ಲ

2020 ರಲ್ಲಿ ಧಾರವಾಡ (Dharwad) ಜಿಲ್ಲಾ ಆರೋಗ್ಯ ಇಲಾಖೆಯು ಕೋವಿಡ್ (Corona Varriors) ಕೆಲಸಕ್ಕೆ 86 ಸಿಬ್ಬಂದಿಗಳನ್ನ ಸರಕಾರ ಮಾಡಿರುವ ವೇತನದ ಮೆಲೆ ನೇಮಕ ಮಾಡಿಕೊಂಡಿದೆ. 

First Published Dec 20, 2021, 11:45 AM IST | Last Updated Dec 20, 2021, 12:43 PM IST

ಬೆಂಗಳೂರು (ಡಿ. 20): 2020 ರಲ್ಲಿ ಧಾರವಾಡ (Dharwad) ಜಿಲ್ಲಾ ಆರೋಗ್ಯ ಇಲಾಖೆಯು ಕೋವಿಡ್ (Corona Warriors)  ಕೆಲಸಕ್ಕೆ 86 ಸಿಬ್ಬಂದಿಗಳನ್ನ ಸರಕಾರ ಮಾಡಿರುವ ವೇತನದ ಮೆಲೆ ನೇಮಕ ಮಾಡಿಕೊಂಡಿದೆ.  ಅವರಿಗೆ ಪ್ರತಿ ತಿಂಗಳು ಸರಿಯಾಗಿ ವೇತನ ಮತ್ತು ರಿಸ್ಕ್ ಅಲೋಯನ್ಸ್, ಕೊಡಬೇಕೆಂದು ಸರಕಾರದ ಆದೇಶವಿದೆ. ಆದರೂ ಅವರಿಗೆ ರಿಸ್ಕ್ ಅಲೋಯನ್ಸ್ ಕೊಡುತ್ತಿಲ್ಲ ಎನ್ನುವ ಆರೋಪಗಳನ್ನ ಸಿಬ್ಬಂದಿಗಳು ಮಾಡಿದ್ದಾರೆ. ಇನ್ನು ಎರಡು ತಿಂಗಳ ಸ್ಯಾಲರಿ ಕೂಡಾ ಆಗಿಲ್ಲ. 

Ejipura Flyover: ಕಾಮಗಾರಿ ವಿಳಂಬ, ಬಿಬಿಎಂಪಿ ಅಧಿಕಾರಿಗಳಿಗೆ ಸಂಸದ ತೇಜಸ್ವಿ ಸೂರ್ಯ ತರಾಟೆ

ಮೊಬೈಲ್ ಸ್ವಾಬ್ ಟೀಮ್ ಧಾರವಾಡ 24, ಮೊಬೈಲ್ ಸ್ವಾಬ್ ಟೀಮ್ ಹುಬ್ಬಳ್ಳಿ 28, ಆಯುಶ್ ವೈದ್ಯರು 06, ಲ್ಯಾಬ್ ಟೆಕ್ನಿಶನ್ 04 ,ನರ್ಸಿಂಗ್ ಆಫಿಸರ್ 18, ಗ್ರೂಪ್ ಡಿ ಸಿಬ್ಬಂದಿಗಳ 04, ಸೇರಿದಂತೆ ಒಟ್ಟು 86 ಸಿಬ್ಬಂದಿಗಳನ್ನ ನೇಮಕ ಮಾಡಿಕೊಂಡಿದೆ. ಗ್ರೂಪ್ ಡಿ ನೌಕರರಿಗೆ ಪ್ರತಿ ತಿಂಗಳು 10 ಸಾವಿರ ರಿಸ್ಕ್ ಅಲೋಯನ್ಸ್ ಕೊಡಬೇಕು ಎಂಬ ಆದೇಶವಿದೆ. ಆದರೆ ಆರೋಗ್ಯ ಇಲಾಖೆಯ‌ ಅಧಿಕಾರಿಗಳಿಗೆ ಕೆಲ ಸಿಬ್ಬಂದಿಗಳಿಗೆ‌ ಕೊಟ್ಟು ಇನ್ನು ಕೆಲ ಸಿಬ್ಬಂದಿಗಳಿಗೆ ಕೊಟ್ಟಿಲ್ಲ. ಇನ್ನು ಈ ರೀತಿಯಾಗಿ ಸಿಬ್ಬಂದಿಗಳು ಮಾಧ್ಯಮಗಳಿಗೆ ತಿಳಿಸಿದರೆ ಕೆಲಸದಿಂದ‌ ತೆಗೆದು ಹಾಕುವ ಬೆದರಿಕೆ‌ ಇದೆ ಎಂದು‌ ಸಿಬ್ಬಂದಿಗಳು ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಹೇಳಿಕೊಂಡಿದ್ದಾರೆ. 

 

Video Top Stories