Asianet Suvarna News Asianet Suvarna News

ಪ್ರತಿಭಟನೆ ಮಾಡಿದವರನ್ನು ಕೈ ಬಿಟ್ಟ ಜಿಂದಾಲ್, ನೌಕರರ ಗೋಳು ಕೇಳೋರಿಲ್ಲ..!

 ಕೊರೋನಾ ಸಂಕಷ್ಟ ಕಾಲದಲ್ಲಿ  ಜಿಂದಾಲ್ ಕಂಪನಿಯ ನೌಕರರು ಕೆಲಸ ಕಳೆದುಕೊಂಡಿದ್ದಾರೆ. 400 ಕ್ಕೂ ಹೆಚ್ಚು ನೌಕರರು ಕೆಲಸ ಕಳೆದುಕೊಂಡು ಕಷ್ಟಪಟ್ಟಿದ್ದರು. ಕೆಲಸವೂ ಇಲ್ಲದೇ, ಸೌಲಭ್ಯವೂ ಇಲ್ಲದೇ ನೌಕರರು ಪರದಾಡುತ್ತಿದ್ದಾರೆ. 

ಬಳ್ಳಾರಿ (ಆ. 04): ಕೊರೋನಾ ಸಂಕಷ್ಟ ಕಾಲದಲ್ಲಿ  ಜಿಂದಾಲ್ ಕಂಪನಿಯ ನೌಕರರು ಕೆಲಸ ಕಳೆದುಕೊಂಡಿದ್ದಾರೆ. 400 ಕ್ಕೂ ಹೆಚ್ಚು ನೌಕರರು ಕೆಲಸ ಕಳೆದುಕೊಂಡು ಕಷ್ಟಪಟ್ಟಿದ್ದರು. 80 ಕ್ಕೂ ಹೆಚ್ಚು ನೌಕರರು ಸಾಮಾಜಿಕ ಹೋರಾಟಗಾರರ ಜೊತೆ ಸೇರಿ ಕಂಪನಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಇದನ್ನೇ ನೆಪವಾಗಿಟ್ಟುಕೊಂಡ ಕಂಪನಿ ಅವರನ್ನು ಬಿಟ್ಟು ಉಳಿದವರನ್ನು ಕೆಲಸಕ್ಕೆ ಸೇರಿಸಿಕೊಂಡಿದೆ.  ಇದ್ಯಾವ ನ್ಯಾಯ ಎಂದು ಕೆಲಸ ಕಳೆದುಕೊಂಡವರು ಪ್ರಶ್ನೆ ಮಾಡುತ್ತಿದ್ದಾರೆ.  ಕೆಲಸವೂ ಇಲ್ಲದೇ, ಸೌಲಭ್ಯವೂ ಇಲ್ಲದೇ ಪರದಾಡುತ್ತಿದ್ದಾರೆ. ಸರ್ಕಾರ ಇವರ ಗೋಳನ್ನು ಕೇಳುತ್ತಿಲ್ಲ. 

ಕ್ಷಣಾರ್ಧದಲ್ಲಿ ಸಮುದ್ರಕ್ಕೆ ಕುಸಿದು ಬಿತ್ತು 2 ಅಂತಸ್ತಿನ ಬಿಲ್ಡಿಂಗ್, ನೀವೆಂದೂ ನೋಡಿರದ ವಿಡಿಯೋ..!