Asianet Suvarna News Asianet Suvarna News

ಕೇವಲ 18 ಗಂಟೆ, 17 ಚಾಕ್‌ಪೀಸ್‌, ರಾಷ್ಟ್ರಗೀತೆ ಕೆತ್ತನೆ ಮಾಡಿ ದಾಖಲೆ ನಿರ್ಮಿಸಿದ ಯುವಕ

ಸಣ್ಣ ಗಾತ್ರದ ಚಾಕ್‌ಪೀಸ್‌ನಲ್ಲಿ ನಮ್ಮ ರಾಷ್ಟ್ರಗೀತೆ ಕೆತ್ತನೆ ಮಾಡುವ ಮೂಲಕ ತನ್ನ ವಿಶೇಷ ನೈಪುಣ್ಯತೆಯನ್ನು ತೋರಿಸಿದ್ದಲ್ಲದೇ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ ಪ್ರದೀಪ್ ನಾಯ್ಕ್. 

First Published Jul 14, 2021, 4:45 PM IST | Last Updated Jul 14, 2021, 5:57 PM IST

ಉತ್ತರ ಕನ್ನಡ (ಜು. 14): ಸಣ್ಣ ಗಾತ್ರದ ಚಾಕ್‌ಪೀಸ್‌ನಲ್ಲಿ ನಮ್ಮ ರಾಷ್ಟ್ರಗೀತೆ ಕೆತ್ತನೆ ಮಾಡುವ ಮೂಲಕ ತನ್ನ ವಿಶೇಷ ನೈಪುಣ್ಯತೆಯನ್ನು ತೋರಿಸಿದ್ದಲ್ಲದೇ, ಇಂಡಿಯಾ ಬುಕ್ ಆಫ್ ರೆಕಾರ್ಡ್‌ನಲ್ಲಿ ತನ್ನ ಹೆಸರನ್ನು ದಾಖಲಿಸಿದ್ದಾರೆ ಪ್ರದೀಪ್ ನಾಯ್ಕ್. ಹೊನ್ನಾವರ ತಾಲೂಕಿನ ಬಸಾಕುಳಿಯ ನಿವಾಸಿಯಾದ ಪ್ರದೀಪ್ ಬಿಇಡಿ ಮಾಡುತ್ತಿದ್ದಾರೆ.  ಕೇವಲ 18 ಗಂಟೆಗಳ ಅವಧಿಯಲ್ಲಿ 17 ಚಾಕ್ ಪೀಸ್ ಬಳಸಿ ರಾಷ್ಟ್ರಗೀತೆ ಕೆತ್ತನೆ ಮಾಡಿರುವುದು ಸಾಧನೆಯೇ ಸರಿ. ಇದರ ಜೊತೆ ಸಂಗೀತ, ತಬಲಾ, ಚಿತ್ರಕಲೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ ಪ್ರದೀಪ್. 

ಕುಟುಂಬ ನಿರ್ವಹಣೆಗೆ ಕೃಷಿ ಮಾಡಿ ಸೈ, ಓದಿನಲ್ಲೂ ಜೈ ಎನಿಸಿಕೊಂಡ ರಾಯಚೂರಿನ ಯುವತಿ!

Video Top Stories