Asianet Suvarna News Asianet Suvarna News

ವಿಶ್ವ ಹುಲಿ ದಿನಾಚರಣೆ ಅಂಗವಾಗಿ ನಮ್ಮ ಬಂಡೀಪುರ ಪ್ರೋಮೋ ಬಿಡುಗಡೆ

Jul 30, 2021, 2:04 PM IST

 ಚಾಮರಾಜನಗರ (ಜು.30): ವಿಶ್ವ ಹುಲಿ ದಿನಾಚರಣೆ ಅಂಗವಾಗಿ ನಮ್ಮ ಬಂಡೀಪುರ ಪ್ರೋಮೋ ಬಿಡುಗಡೆ ಮಾಡಲಾಗಿದೆ.  ರಾಜ್ಯದಲ್ಲೇ  ಅತಿ ಹೆಚ್ಚು ಹುಲಿಗಳಿರುವ ಅರಣ್ಯಗಳಲ್ಲಿ ಎರಡನೇ ಸ್ಥಾನದಲ್ಲಿರುವ ಬಂಡೀಪುರದ ಜೀವ ವೈವಿಧ್ಯತೆಯನ್ನು ಈ ಪ್ರೋಮೋ ತೆರೆದಿಟ್ಟಿದೆ. 

ಹುಲಿ ಸಂಖ್ಯೆ: ನಾಗರಹೊಳೆ ನಂ.2, ಬಂಡೀಪುರ ನಂ.3ನೇ ಸ್ಥಾನ!

ಹುಲಿ, ಚಿರತೆ, ಆನೆ ಮೊದಲಾದ ಪ್ರಾಣಿ ಪಕ್ಷಿಗಳ ತಾಣದ ಅನಾವರಣ ಮಾಡಲಾಗಿದೆ.  ಡ್ರೋಣ್ ಕ್ಯಾಮೆರಾ ಮೂಲಕವೂ  ಬಂಡೀಪುರದ ಸೌಂದರ್ಯ ಸೆರೆ ಹಿಡಿಯಲಾಗಿದೆ.  ಕಣ್ಮನ ಸೆಳೆಯುವ ವನ್ಯಜೀವಿಗಳ ತಾಣ  ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಬಗ್ಗೆ ಕರ್ನಾಟಕ ಸರ್ಕಾರ ಹಾಗು ಬಂಡೀಪುರ ಟೈಗರ್ ರಿಸರ್ವ್  ಪ್ರೋಮೋ ತಯಾರಿಸಿದೆ.  

(ವಿಡಿಯೋ ಕೃಪೆ  - bandipur_tiger_reserve_btr)