Kantara Effect: ದೈವಾರಾಧನೆ ಹೆಸರಿನಲ್ಲಿ ಹಣ ವಸೂಲಿ ದಂಧೆ: ಕರಾವಳಿಗರ ಆಕ್ರೋಶ
ಕರಾವಳಿ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲೂ ದೈವಾರಾಧನೆಗೆ ಬೇಡಿಕೆ ಹೆಚ್ಚಾಗಿದ್ದು, ದೈವದ ಕಟ್ಟ ಕಟ್ಟಿ ಪೇಟಿಎಂ ಮೂಲಕ ಹಣ ವಸೂಲಿ ದಂಧೆ ಶುರುವಾಗಿದೆ.
ಕಾಂತಾರ ಸಿನಿಮಾ ಬಳಿಕ ಕರಾವಳಿ ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಪಂಜುರ್ಲಿ, ಗುಳಿಗ, ಕೊರಗಜ್ಜ, ದೈವದ ಬಗ್ಗೆ ಜನರಲ್ಲಿ ಕುತೂಹಲ ಮೂಡಿದೆ. ಜನರ ನಂಬಿಕೆ, ದೈವದ ಕುತೂಹಲವೇ ಕೆಲವರಿಗೆ ಬಂಡವಾಳವಾಗಿದ್ದು, ಹೊರ ಜಿಲ್ಲೆಗಳಲ್ಲಿ ದೈವದ ಕಟ್ಟ ಕಟ್ಟಿ ದಂಧೆಗೆ ಇಳಿದಿದ್ದಾರೆ ವಸೂಲಿಕೋರರು. ಹೊರ ಜಿಲ್ಲೆಗಳಲ್ಲಿ ದೈವದ ಕಟ್ಟ ಕಟ್ಟಿ ಪೇಟಿಎಂ ಮೂಲಕ ಹಣ ವಸೂಲಿ ಮಾಡಲಾಗುತ್ತಿದ್ದು, ಕರಾವಳಿ ದೈವಗಳ ಹೆಸರು ದುರ್ಬಳಕೆಗೆ ಕರಾವಳಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲು ಕರಾವಳಿ, ತುಳುನಾಡು ಭಾಗದಲ್ಲಿ ನಡೆಯುತ್ತಿದ್ದ ದೈವಕೋಲವನ್ನು, ಇದೀಗ ಮೈಸೂರು ಹಾಗೂ ಬೆಂಗಳೂರು ಭಾಗಗಳಲ್ಲಿ ನಡೆಸಲು ತಯಾರಿ ನಡೆದಿದೆ. ಹಣಕ್ಕಾಗಿ ಮೊದಲು ಕರಾವಳಿ ದೈವದ ಹೆಸರುಗಳನ್ನು ಹೇಳುವುದನ್ನು ನಿಲ್ಲಿಸಿ, ಹೊರ ಜಿಲ್ಲೆಗಳಲ್ಲಿ ದೈವಾರಾಧನೆ ನಡೆಸಲು ಹೋದರೆ ಬಹಿಷ್ಕಾರ ಎಚ್ಚರಿಕೆ ನೀಡಿದ್ದಾರೆ ಕರಾವಳಿಗರು. ಸಾಮಾಜಿಕ ಜಾಲತಾಣಗಳ್ಲಿ ಈಗ ಬಿಸಿ ಬಿಸಿ ಚರ್ಚೆ ನಡೆದಿದ್ದು, ಹೊರ ಜಿಲ್ಲೆಗಳಲ್ಲಿ ನಡೆಸುವ ಕರಾವಳಿಯ ದೈವಾರಾಧನೆಗೆ ಮಹತ್ವ ಇಲ್ಲ.
ವಿಜಯಪುರ: ಅತಂತ್ರ ಸ್ಥಿತಿಯಲ್ಲಿ ಪಾಲಿಕೆ ಸದಸ್ಯರು..!