Asianet Suvarna News Asianet Suvarna News

ಕಾರ್ಮಿಕರಿಗಾಗಿ ರಸ್ತೆ ಬದಿಯಲ್ಲೇ ಮಲಗಿದ ಶಾಸಕ ನಡಹಳ್ಳಿ..!

May 16, 2020, 12:05 PM IST

ವಿಜಯಪುರ(ಮೇ.16): ಲಾಕ್‌ಡೌನ್‌ ಆದ ಹಿನ್ನಲೆಯಲ್ಲಿ ಸ್ವಕ್ಷೇತ್ರದ ಕೂಲಿ ಕಾರ್ಮಿಕರನ್ನ ಕರೆತರಲು ಗೋವಾದ ಗಡಿಗೆ ಹೋಗಿದ್ದ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ರಸ್ತೆ ಬದಿ ಮಲಗಿದ್ದಾರೆ. 

ದೇಶಾದ್ಯಂತ ನಾಳೆ ಲಾಕ್‌ಡೌನ್ 3.0 ಅಂತ್ಯ; ಬಸ್, ಮೆಟ್ರೋ ಕ್ಲಿನಿಕ್, ಸಲೂನ್ ಆರಂಭ?

ಕಾರ್ಮಿಕರು ಜೀವನೋಪಾಯಕ್ಕಾಗಿ ಗೋವಾಕ್ಕೆ ಹೋಗಿದ್ದರು. ಲಾಕ್‌ಡೌನ್‌ನಿಂದ ಇವರೆಲ್ಲ ಸಂಕಷ್ಟದಲ್ಲಿದ್ದರು.ಹೀಗಾಗಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ ಕಾರ್ಮಿಕರನ್ನ ಕರೆತರಲು ಸ್ವತಃ ನಡಹಳ್ಳಿ ಅವರೇ ಚೋರ್ಲಾ ಗಡಿಗೆ ಹೋಗಿದ್ದರು. ಈ ವೇಳೆ ರಾತ್ರಿ ರಸ್ತೆ ಬದಿ ಅಂಗಡಿ ಮುಂದೆ ಮಲಗಿದ್ದರು.