ಲಾಕ್‌ಡೌನ್: ದಿವ್ಯಾಂಗ ಮಗನ ಸಾಕಲಾಗದೆ ನಿಸ್ಸಹಾಯಕರಾಗಿ ಅಳ್ತಿದ್ದಾರೆ ಈ ಅಮ್ಮ
ಬೆಳಗಾವಿ(ಏ.15): ದೇಶದಲ್ಲಿ ಲಾಕ್‌ಡೌನ್ ಮುಂದುವರಿಸಲಾಗಿದೆ. ಕೊರೋನಾ ವೈರಸ್ ಹರೆಡುವುದನ್ನು ತಡೆಗಟ್ಟಲು ಲಾಕ್‌ಡೌನ್ ಮುಂದುವರಿಸುವುದು ಅನಿವಾರ್ಯವಾಗಿದ್ದರೂ, ಇದೇ ಸಂದರ್ಭದಲ್ಲಿ ಬಹಳಷ್ಟು ಜನ ಲಾಕ್‌ಡೌನ್ ಎಫೆಕ್ಟ್‌ನಿಂದ ತತ್ತರಿಸಿದ್ದಾರೆ.
ಬೆಳಗಾವಿಯ ತಾಯಿಯೊಬ್ಬರು ವಿಶೇಷಾಂಗ ಮಗುನನ್ನು ಸಾಕಲಾಗದೆ ಕಷ್ಟಪಡುತ್ತಿದ್ದಾರೆ. ಗಾರ್ಮೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಲಾಕ್‌ಡೌನ್‌ನಿಂದಾಗಿ ಕೆಲಸವೂ ಇಲ್ಲದೆ ಕಷ್ಟಪಡುತ್ತಿದ್ದಾರೆ.
ರಾಜ್ಯದಲ್ಲಿ ಕಳೆದ 6 ದಿನದಲ್ಲಿ 15 ಮಕ್ಕಳಿಗೆ ತಗುಲಿದೆ ಕೊರೋನಾ ಸೋಂಕು..!
ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ತಾಯಿ ತಮ್ಮ ಮಗನನ್ನು ಸಾಕಲು ಕಷ್ಟಪಡುತ್ತಿದ್ದಾರೆ. ಅಶ್ವಿನಿ ಎಂಬ ಮಹಿಳೆ ಕೆಲಸವಿಲ್ಲದೆ ತಮ್ಮ ದಿವ್ಯಾಂಗ ಮಗನನ್ನು ಸಾಕಲಾಗದೆ ಕಣ್ಣೀರಿಡುತ್ತಿರುವ ದೃಶ್ಯ ಎಂಥವರನ್ನೂ ಕರಗಿಸುವಂತಿದೆ. ಇಲ್ಲಿದೆ ವಿಡಿಯೋ.