Hubballi Violence: ಮಸೀದಿ, ಮೌಲ್ವಿಗಳ ಸರ್ವೆಗೆ ಶಾಸಕ ಅರವಿಂದ್‌ ಬೆಲ್ಲದ್ ಆಗ್ರಹ

*  ರಾಜ್ಯದಲ್ಲಿ ಧರ್ಮ ದಳ್ಳುರಿಯ ಜಿದ್ದಾಜಿದ್ದಿನ ಫೈಟ್‌ 
*  ಹುಬ್ಬಳ್ಳಿ ಹಿಂಸಾಚಾರದ ಹಿನ್ನೆಲೆಯಲ್ಲಿ ಶಾಸಕರ ಅಭಿಪ್ರಾಯ
*  ಬಿಜೆಪಿ ಶಾಸಕರ ಸಲಹೆಯನ್ನ ಸರ್ಕಾರ ಒಪ್ಪುತ್ತಾ? 

First Published Apr 20, 2022, 1:22 PM IST | Last Updated Apr 20, 2022, 1:22 PM IST

ಹುಬ್ಬಳ್ಳಿ(ಏ.20):  ಹುಬ್ಬಳ್ಳಿ ಗಲಭೆ, ಈಶ್ವರಪ್ಪ ರಾಜೀನಾಮೆಯ ಬಳಿಕವೂ ಆಜಾನ್‌ ಸದ್ದು ಮಾಡುತ್ತಿದೆ. ಹೌದು, ಮತ್ತೊಮ್ಮೆ ರಾಜ್ಯದಲ್ಲಿ ಧರ್ಮ ದಳ್ಳುರಿಯ ಜಿದ್ದಾಜಿದ್ದಿನ ಫೈಟ್‌ ಶುರುವಾಗಿದೆ. ಮಸೀದಿ, ಮೌಲ್ವಿಗಳ ಸರ್ವೇಗೆ ರಾಜ್ಯ ಸರ್ಕಾರ ಮುಂದಾಗಬೇಕು ಅಂತ ಬಿಜೆಪಿ ಶಾಸಕರು ಸಲಹೆ ಕೊಡುತ್ತಿದ್ದಾರೆ. ಹುಬ್ಬಳ್ಳಿ ಹಿಂಸಾಚಾರದ ಹಿನ್ನೆಲೆಯಲ್ಲಿ ಶಾಸಕರು ಈ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ. ಆದರೆ, ಬಿಜೆಪಿ ಶಾಸಕರ ಸಲಹೆಯನ್ನ ಸರ್ಕಾರ ಒಪ್ಪುತ್ತಾ? ಎಂಬುದನ್ನ ಕಾದುನೋಡಬೇಕಿದೆ. ಈ ಬಗ್ಗೆ ಮಾತನಾಡಿದ ಬಿಜೆಪಿ ಶಾಸಕ ಅರವಿಂದ್‌ ಬೆಲ್ಲದ್ ಅವರು, ಮಸೀದಿ, ಮೌಲ್ವಿಗಳ ಸರ್ವೇಗೆ ರಾಜ್ಯ ಸರ್ಕಾರ ಮುಂದಾಗಬೇಕು ಅಂತ ಸಲಹೆ ನೀಡಿದ್ದಾರೆ. 

ರಾಷ್ಟ್ರ ರಾಜಧಾನಿಯಲ್ಲಿ ಬುಲ್ಡೋಜರ್‌ ಸದ್ದು, ಅಕ್ರಮ ಕಟ್ಟಡ ತೆರವಿಗೆ ಮುಂದಾದ ಪಾಲಿಕೆ

Video Top Stories