Asianet Suvarna News Asianet Suvarna News

ನಡುಗುತ್ತಿದೆ ಭೂಮಿ, ಕುಸಿಯುತ್ತಿದೆ ಬೆಟ್ಟ, ಮಾಯವಾಯ್ತು 100 ಮೀಟರ್ ರಸ್ತೆ!

Aug 1, 2021, 1:38 PM IST

ಶಿಮ್ಲಾ(ಆ.01): ನೋಡ ನೋಡುತ್ತಲೇ ಕುಸಿದು ಬಿತ್ತು ಬೃಹತ್ ಬೆಟ್ಟ. ಆ ದುರ್ಘಟನೆಗೆ ಜೀವಂತ ಸಮಾಧಿಯಾದ್ರು ಒಂಭತ್ತು ಜನ. ದೈತ್ಯ ಮಳೆ, ರಣರಕ್ಕಸ ಪ್ರವಾಹ. ಕುಸಿಯುತ್ತಿದೆ ಬೆಟ್ಟ, ಬಾಯ್ಬಿಡುತ್ತಿದೆ ಭೂಮಿ. ಬೆಚ್ಚಿ ಬೀಳಿಸುತ್ತೆ ಬೆಟ್ಟದ ಜೀವದ ಭೀಕರ ಆಕ್ರಂದನ. ಈಗೀಗ ಕರ್ನಾಟಕದಲ್ಲೂ ಶುರುವಾಯ್ತು ಆತಂಕ.

ಹೌದು ಹಿಮಾಚಲ ಪ್ರದೇಶದಲ್ಲಿ ಸಂಭವಿಸಿದ ಭೂಕುಸಿತದ ಭೀಕರ ದೃಶ್ಯಗಳು ಸದ್ಯ ಭಾರೀ ವೈರಲ್ ಆಗಿದೆ. ಈ ದುರಂತ ಅನೇಕರ ಜೀವವನ್ನು ಬಲಿ ಪಡೆದಿದ್ದು, ನೈಸರ್ಗಿಕ ವಿಕೋಪಗಳ ಬಗ್ಗೆ ಜನರಲ್ಲಿ ಭಾರೀ ಭಯ ಮೂಡಲಾರಂಭಿಸಿದೆ.