ಮಕ್ಕಳನ್ನ ಮರಕ್ಕೆ ಕಟ್ಟಿ ಬೀಡಿ ಸೇದಿಸಿದ ದುಷ್ಟರು: ಹೇಳಿದ್ದನ್ನ ಕೇಳದಿದ್ರೆ ಮನಬಂದಂತೆ ಥಳಿತಾಸ್ತಾರಂತೆ..!
* ಪೊಲೀಸರಿಗೆ ಈ ವಿಡಿಯೋ ಬಗ್ಗೆ ಮಾಹಿತಿ ಇಲ್ವಂತೆ
* ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್
* ಸರ್ಕಾರಿ ಶಾಲೆಯ ಕಾಂಪೌಂಡ್ ಒಳಗೆ ನಡೆದ ಘಟನೆ
ಬೆಂಗಳೂರು(ಅ.25): ದುಷ್ಕರ್ಮಿಗಳು ಮಕ್ಕಳನ್ನ ಮರಕ್ಕೆ ಕಟ್ಟಿಹಾಕಿ ಬೀಡಿ ಸೇದಿಸಿದ ಘಟನೆ ನಗರದ ದೇವಸಂದ್ರದಲ್ಲಿ ನಡೆದಿದೆ. ಸರ್ಕಾರಿ ಶಾಲೆಯ ಕಾಂಪೌಂಡ್ ಒಳಗೆ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಹೇಳಿದ್ದನ್ನ ಕೇಳದೆ ಹೋದರೆ ದುಷ್ಟರು ಮನಬಂದಂತೆ ಥಳಿಸುತ್ತಾರಂತೆ. ತಮಿಳಿನಲ್ಲಿ ಮಾತನಾಡುವ ದುಷ್ಕರ್ಮಿಗಳು ಮಕ್ಕಳನ್ನ ಮರಕ್ಕೆ ಕಟ್ಟಿಹಾಕಿ ಬೀಡಿ ಸೇದಿಸಿ ವಿಕೃತಿ ಮೆರೆದಿದ್ದಾರೆ. ಪೊಲೀಸರಿಗೆ ಈ ವಿಡಿಯೋ ಬಗ್ಗೆ ಮಾಹಿತಿ ಇಲ್ಲ ಅಂತ ತಿಳಿದು ಬಂದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
20 ತಿಂಗಳ ಬಳಿಕ ಚಿಣ್ಣರು ಶಾಲೆಗೆ, ಶಿಕ್ಷಕರು, ಮಕ್ಕಳು ಇಬ್ಬರಲ್ಲೂ ಸಂಭ್ರಮ.!