Asianet Suvarna News Asianet Suvarna News

Gadag: ರಾತ್ರೋ ರಾತ್ರಿ ಬಾಳೆಗಿಡ ಕೊಚ್ಚಿ ಹಾಕಿದ ದುಷ್ಕರ್ಮಿಗಳು: ಸಂಕಷ್ಟದಲ್ಲಿ ಅನ್ನದಾತ

*  ಬಾಳೆ ಬೆಳೆಯನ್ನ ಕೊಚ್ಚಿ ಹಾಕಿ ಅನಾಮಿಕರಿಂದ ವಿಕೃತಿ
*  ಒಂದಲ್ಲ ಎರಡಲ್ಲ ಬರೋಬ್ಬರಿ 1,500 ಗಿಡಗಳಿಗೆ ಕೊಡಲಿ
*  ಕಲ್ಲು ತುಂಬಿ  ಎರಡು ಬೋರ್‌ವೆಲ್‌ಗಳಿಗೆ ಹಾನಿ
 

ಗದಗ(ಡಿ.09):  ಹೊಸ ಬಾಳು ಕಟ್ಕೋಬೇಕು.. ಕೃಷಿಯಲ್ಲಿ ಬದುಕು ಕಂಡ್ಕೋಬೇಕು ಅಂತಾ ಆ ಯುವಕರು ಹಂಬಲಿಸದವರು. ಹೀಗಾಗಿ ದುಡಿದ ಹಣವನ್ನೆಲ್ಲ ಬಳಸಿ ಬಾಳೆ ಬೆಳೆ ಬೆಳೆದಿದ್ರು. ಆದ್ರೆ, ರಾತ್ರಿ ಕಳೆದು ಬೆಳಗ್ಗೆಯಾಗೋದ್ರಲ್ಲಿ ಅವರು ಕನಸು ನುಚ್ಚು ನೂರಾಗಿತ್ತು. ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಾಳೆ ತೋಟ ನಲುಗಿ ಹೋಗಿತ್ತು..!

ನಳನಳಿಸಬೇಕಿದ್ದ ಬಾಳೆ ನೆಲಕ್ಕುರುಳಿದೆ. ತೋಟದಲ್ಲಿ‌ ಸ್ಮಶಾನ ಕಳೆ ತಾಂಡವವಾಡ್ತಿದೆ.‌ ಮಗುವಂತೆ ಬೆಳೆಸಿದ್ದ ಬಾಳೆಗೆ ಕೊಡಲಿ ಪೆಟ್ಟು ಬಿದ್ದಿರೋದನ್ನ ರೈತ ಮಹಿಳೆಗೆ ಅರಗಿಸಿಕೊಳ್ಳಲಾಗ್ತಿಲ್ಲ. ಅನಾಮಿಕನ ಅಟ್ಟಹಾಸಕ್ಕೆ ರೈತ ಕುಟುಂಬವೇ ಕಣ್ಣೀರಾಗಿದೆ. ಒಂದ್ಕಡೆ ಅತಿವೃಷ್ಟಿ ರೈತರನ್ನ ಬಿಟ್ಟುಬಿಡದಂಗೆ ಕಾಡ್ತಿದ್ರೆ ಮತ್ತೊಂದ್ಕಡೆ ದುಷ್ಕರ್ಮಿಗಳು ರಾತ್ರೋ ರಾತ್ರಿ ಬೆಳೆ ಕಡಿದು ದುಷ್ಕೃತ್ಯ ವೆಸಗುತ್ತಿದ್ದಾರೆ.  

IAF Helicopter Crash : ದುರಂತಕ್ಕೆ ಈಡಾದ MI-17-V5 ಬ್ಲಾಕ್‌ ಬಾಕ್ಸ್‌ಗಾಗಿ ಶೋಧ

ಹೌದು, ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಒಡವಿ ಹೊಸೂರು ಗ್ರಾಮದ ಹಾಲೇಶ್ ಗಟರೆಡ್ಡಿಹಾಳ ಅನ್ನೋ ರೈತ ಬೆಳೆದಿದ್ದ ಬಾಳೆ ಬೆಳೆಯನ್ನ ಅನಾಮಿಕರು ಕೊಚ್ಚಿ ವಿಕೃತಿ ಮೆರೆದಿದ್ದಾರೆ‌. ಕೆಲದಿನಗಳ ಹಿಂದೆ ರಾತ್ರಿ ತೋಟಕ್ಕೆ ನುಗ್ಗಿದ್ದ ದುಷ್ಕರ್ಮಿಗಳು ಎರಡೂವರೆ ಎಕರೆಯಲ್ಲಿ ಬೆಳೆದಿದ್ದ ಬೆಳೆಯನ್ನ ನಾಶ ಮಾಡಿ ರಾಕ್ಷಸಿ ಕೃತ್ಯ ತೋರಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 1,500 ಗಿಡಗಳನ್ನ ತುಂಡರಿಸಿದ್ದಾರೆ. ಸಾಲದ್ದಕ್ಕೆ ತೋಟದ ಉಪಯೋಗಕ್ಕೆ ಕೊರೆಸಿದ್ದ ಎರಡೂ ಬೋರ್‌ವೆಲ್‌ಗಳನ್ನ ಹಾಳು ಮಾಡಿದ್ದಾರೆ. ಒಂದ್ರಲ್ಲಿ ಕಲ್ಲು ತುಂಬಿದ್ರೆ, ಇನ್ನೊಂದ್ರ ಕೇಸಿಂಗ್ ಪೈಪ್ ಒಡೆದು ಮೋಟಾರು ಹಾಗೂ ವೈರ್‌ಗಳನ್ನ ಕಟ್ ಮಾಡಿ ನೀಚ ಕೆಲಸ ಕೆಲಸ ಮಾಡಿದ್ದಾರೆ ಅಂತ ಬೆಳೆ ಕಳೆದುಕೊಂಡ ರೈತ ಹಾಲೇಶ್ ತಿಳಿಸಿದ್ದಾರೆ.  

ಹಾಲೇಶ ಹಾಗೂ ಸಹೋದರ ಮಂಜುನಾಥ್ ಚಿಕ್ಕದಿನಿಂದ ಮಂಗಳೂರಲ್ಲಿ ಗಾರೆ ಕೆಲಸ ಮಾಡ್ತಿದ್ರು. ಕೃಷಿಯಲ್ಲೇ ಏನಾದ್ರೂ ಸಾಧನೆ ಮಾಡ್ಬೇಕು ಅಂತಾ ಮಂಗಳೂರು ಬಿಟ್ಟು ಊರು ಸೇರಿದ್ರು.. ಸಾಂಪ್ರದಾಯಿಕ ಕೃಷಿ ಬಿಟ್ಟು ತೋಟಗಾರಿಕೆ ಕೃಷಿ ಮಾಡೋದಕ್ಕೆ ಪ್ಲಾನ್ ಮಾಡಿದ್ರು.. ಇದ್ಕಾಗೆ ಎರಡು ಬೋರ್ ಕೊರೆಸಿದ್ರು. ಎರಡೂ ಬೋರ್‌ವೆಲ್‌ಗಾಗಿ ಸರಿ ಸುಮಾರು ಎರಡು ಲಕ್ಷ ವ್ಯಯ ಆಗಿತ್ತು. ದುಡಿದ ದುಡ್ಡೆಲ್ಲ ಕೃಷಿಗೆ ಹಾಕಿದ್ರು. ಎರಡು ಲಕ್ಷ ರೂಪಾಯಿ ಖರ್ಚು ಮಾಡಿ ಬಾಳೆ ತಂದು ಹಚ್ಚಿದ್ರು..  ಅಲ್ದೆ, ಹನಿ ನೀರಾವರಿ ಮಾಡ್ಕೊಂಡಿದ್ರು.. ಐದು ತಿಂಗಳು ಮಗುವಿನಂತೆ ಬಾಳೆ ಬೆಳೆಸಿದ್ರು..  ಆದ್ರೆ, ಹಾಲೇಶನ ಸ್ವಾವಲಂಬಿ ಜೀವನ ಕೆಲವರಿಗೆ ಸಹನ ಆಗ್ಲಿಲ್ಲ ಅನ್ಸುತ್ತೆ.. ರಾತ್ರಿ ಜಮೀನಿಗೆ ನುಗ್ಗಿ ಮಾಡಬಾರದ ಕೆಲಸ ಮಾಡಿ ಪರಾರಿಯಾಗಿದ್ದಾರೆ‌..

ಹಾಲೇಶ್, ಕೃಷಿಯಲ್ಲಿ ಏನಾದ್ರೂ ಸಾಧನೆ ಮಾಡ್ಬೇಕು ಅಂತಾ ಸ್ವಂತ ಊರಿಗೆ ಮರಳಿದ್ರು. ಯಾರ ತಂಟೆಗೂ ಹೋಗದೇ ತಾನಾಯ್ತು ತನ್ನ ಕೃಷಿ ಆಯ್ತು ಅಂತಿದ್ದ ಕುಟುಂಬಕ್ಕೆ ಈಗ ಬರ ಸಿಡಿಲ ಆಘಾತವಾಗಿದೆ. ಸಂಕಷ್ಟದಲ್ಲಿರೋ ಕುಟುಂಬಕ್ಕೆ ಸರ್ಕಾರ ನೆರವು ನೀಡ್ಬೇಕು. ಜೊತೆಗೆ ಹೀನ, ಹೇಯ ಕೃತ್ಯ ಮಾಡಿರೋ ಪುಂಡರಿಗೆ ಸರಿಯಾದ ಶಾಸ್ತಿಯಾಗ್ಬೇಕು ಎಂಬುದು ನಮ್ಮ ಆಶಯ.
 

Video Top Stories