IAF Helicopter Crash : ದುರಂತಕ್ಕೆ ಈಡಾದ MI-17-V5 ಬ್ಲಾಕ್ ಬಾಕ್ಸ್‌ಗಾಗಿ ಶೋಧ
ಹೆಲಿಕಾಪ್ಟರ್ ದುರಂತ ನಡೆದ ಸ್ಥಳದಲ್ಲಿ ಸೇನಾ ಪಡೆ ಮೊಕ್ಕಾಂ ಹೂಡಿದೆ. ಸೇನಾ ಪಡೆ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಸ್ಥಳದಲ್ಲಿ ದುರಂತಕ್ಕೆ ಈಡಾದ MI-17-V5 ಕಾಪ್ಟರ್ ಬ್ಲಾಕ್ ಬಾಕ್ಸ್‌ಗಾಗಿ ಶೋಧ ಕಾರ್ಯನಡೆಸಲಾಗುತ್ತಿದೆ
ಕುನೂರು (ಡಿ.09): ತಮಿಳುನಾಡಿನಲ್ಲಿ(Tamilnadu) ಸಂಭವಿಸಿದ ಸೇನಾ ವಾಹನ ದುರಂತ 13 ಜನರ ಜೀವ ಕಸಿದಿದೆ. ಜನರಲ್ ಬಿಪಿಲ್ ರಾವತ್ (Gen Bipin Rawat) ಹಾಗೂ ಅವರ ಪತ್ನಿ ಮಧುಲಿಕಾ ಸೇರಿ 14 ಮಂದಿ ಮರಣ ಹೊಂದಿದ್ದಾರೆ.
ಹೆಲಿಕಾಪ್ಟರ್ (Helicipter) ದುರಂತ ನಡೆದ ಸ್ಥಳದಲ್ಲಿ ಸೇನಾ ಪಡೆ ಮೊಕ್ಕಾಂ ಹೂಡಿದೆ. ಸೇನಾ ಪಡೆ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ. ಸ್ಥಳದಲ್ಲಿ ದುರಂತಕ್ಕೆ ಈಡಾದ MI-17-V5 ಕಾಪ್ಟರ್ ಬ್ಲಾಕ್ ಬಾಕ್ಸ್‌ಗಾಗಿ ಶೋಧ ಕಾರ್ಯನಡೆಸಲಾಗುತ್ತಿದೆ. ಬ್ಲಾಕ್ ಬಾಕ್ಸ್‌ಗಾಗಿ (Black Box) 40 ಸೇನಾ ಅಧಿಕಾರಿಗಳು (Army Officers) ಸ್ಥಳದಲ್ಲಿ ಶೋಧ ನಡೆಸುತ್ತಿದ್ದಾರೆ. ಬ್ಲಾಕ್ ಬಾಕ್ಸ್ ಪತ್ತೆಯಾದರೆ ಅಪಘಾತದ ಕಾರಣ ತಿಳಿಯಲಿದೆ.